ಯಕ್ಷಗಾನದಿಂದ ಜನಜಾಗೃತಿ ಸಾದ್ಯ

ಮೂಲ್ಕಿ: ಇಂದಿನ ಯುವಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಜೀವನದಲ್ಲಿ ಶಿಸ್ತು,ಪ್ರಾಮಾಣಿಕತೆ, ಶೃದ್ಧೆ ಮತ್ತು ಸಮರ್ಪಣಾಭಾವದಿಂದ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಭವಿಷ್ಯದಲ್ಲಿ ಇನ್ನೊಬ್ಬರಿಗೆ ಮಾದರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಕ್ಷಗಾನದಿಂದ ಜನಜಾಗೃತಿ ಸಾದ್ಯ, ಯುವಕರು ಶೃದ್ದೆ ಹಾಗೂ ಭಕ್ತಿಯಿಂದ ಅಥೈಸಿಕೊಂಡರೆ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ಮೂಲ್ಕಿ ನಗರಪಂಚಾಯತಿ ಸದಸ್ಯ ಶೈಲೇಶ್ ಕುಮಾರ್ ಹೇಳಿದರು. ಅವರು ನೆಹರೂ ಯುವ ಕೇಂದ್ರ ಮಂಗಳೂರು ಮತ್ತು ಬಾರತ ಸರಕಾರ ಗೀತೆ ಮತ್ತು ನಾಟಕ ವಿಭಾಗ ಬೆಂಗಳೂರು,ವಾರ್ತಾ ಮತ್ತು ಪ್ರಸಾರ ಇಲಾಖೆ ಇದರ ವತಿಯಿಂದ ಆದರ್ಶ ಯುವಕ ವೃಂದ ಕೆಎಸ್‌ರಾವ್‌ನಗರ ಇದರ ಆಶ್ರಯದಲ್ಲಿ ಕರ್ನಾಟಕ ಕಲಾದರ್ಶಿನಿ(ರಿ) ಅವರಿಂದಜನಜಾಗೃತಿ ಹಾಗೂ ಯಕ್ಷಗಾನ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ನಗರಪಂಚಾಯತಿ ಸದಸ್ಯ ಹರ್ಷರಾಜ ಶೆಟ್ಟಿ ವಹಿಸಿದ್ದರು.ವೇದಿಕೆಯಲ್ಲಿ ಸಮಾಜ ಸೇವಕರಾದ ವಿಠಲ ಎನ್,ಪ್ರವೀಣ ನಾಯರ್, ಭೀಮಾಶಂಕರ, ಶಶಿಕಲಾ ಆರ್.ಕೆ, ನೆಹರೂ ಯುವ ಕೇಂದ್ರದ ತಾಲ್ಲೂಕು ಸಂಘಟಕ ರಘುವೀರ್ ಸೂಟರ್‌ಪೇಟೆ, ಕಲಾವಿದರಾದ ಸುಬ್ರಾಯ ಹೆಬ್ಬಾರ್, ಶ್ರೀಧರ ಕಾಂಚನ್, ಶ್ರೀನಿವಾಸ ಸಾಸ್ತಾನ ಮತ್ತಿತರು ಇದ್ದರು.

ವಿಠಲ ಎನ್.ಎಮ್ ಸ್ವಾಗತಿಸಿದರು, ಭೀಮಾಶಂಕರ ದನ್ಯವಾದ ಅರ್ಪಿಸಿದರು.

Punithkrishna

Mulki-13071502

Comments

comments

Comments are closed.

Read previous post:
Mulki-13071501
ನೂತನ ಪಠ್ಯಕ್ರಮಗಳ ಬಗ್ಗೆ ಮಾಹಿತಿ

ಮೂಲ್ಕಿ: ಸತತ ಅಧ್ಯಯನಸೀಲತೆಯಿಂದ ಮಾತ್ರ ಪರಿಣಾಮಕಾರಿ ಶಿಕ್ಷಣ ಸಾಧ್ಯವಾಗಿಲಿದ್ದು ಉಪಮ್ಯಾಸಕರು ಅಧ್ಯಯನಶೀಲರಾಗಿ ವಿವಿಧ ಕಾರ್ಯಾಗಾರಗಳಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸಿದಲ್ಲಿ ಉನ್ನತಿ ಸಾಧ್ಯ ಎಂದು ಮೂಲ್ಕಿ ಸೀಮೆ ಅರಸರಾದ...

Close