ಜನಜಾಗೃತಿ ಹಾಗೂ ಯಕ್ಷಗಾನ ಕಾರ್ಯಕ್ರಮ

ಮೂಲ್ಕಿ: ಯಕ್ಷಗಾನದಂತಹ ಕಲೆಯಲ್ಲಿ ನೃತ್ಯ,ಸಂಗೀತ ಸೇರಿದಂತೆ ಎಲ್ಲಾ ರೀತಿಯ ಆಯಾಮಗಳಿದ್ದು ಯುವ ಪೀಳಿಗೆ ಯಕ್ಷಗಾನದಂತಹ ಕಲೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕೆಂದು ಮಂಗಳೂರಿನ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಸ್ಮಾರಕ ವೈದ್ಯಕೀಯ ಮಹಾ ವಿದ್ಯಾಲಯದ ಸಮುದಾಯ ಸೇವೆ ವಿಭಾಗದ ಮುಖ್ಯಸ್ಥ ಡಾ ಉದಯ ಕಿರಣ್ ಹೇಳಿದರು.
ನೆಹರೂ ಯುವ ಕೇಂದ್ರ ಮಂಗಳೂರು, ಭಾರತ ಸರಕಾರದ ಗೀತೆ ಮತ್ತು ನಾಟಕ ವಿಭಾಗ ಬೆಂಗಳೂರು ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಂಯೋಜನೆಯಲ್ಲಿ ಮೂಲ್ಕಿ ಕಾರ್ನಾಡಿನ ಸರ್ಕಾರಿ ಫ್ರೌಢ ಶಾಲೆಯ ಸಹಯೋಗದೊಂದಿಗೆ ಮೂಲ್ಕಿ ಕಾರ್ನಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಕಲಾ ದರ್ಶಿನಿಯವರಿಂದ ಜರಗಿದ ಜನಜಾಗೃತಿ ಹಾಗೂ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜ್ ಪ್ರಾಚಾರ್ಯ ವಿಷ್ಣು ಮೂರ್ತಿ ಸಮಾರಂಭದ ಅಧ್ಯಕ್ಷತೆವಹಿಸಿದರು. ಬೋಳ ಸುರೇಂದ್ರ ಕಾಮತ್, ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಹರ್ಷರಾಜ ಶೆಟ್ಟಿ, ಕೋಟೆಕೇರಿ ನವದುರ್ಗಾ ಯುವಕ ವೃಂದದ ಉಪಾಧ್ಯಕ್ಷ ಜಯ ಪೂಜಾರಿ, ಕಲಾವಿದರಾದ ಸುಬ್ರಾಯ ಹೆಬ್ಬಾರ್, ಶ್ರೀಧರ ಕಾಂಚನ್, ಶ್ರೀನಿವಾಸ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು.

Prakash Suvarna

Mulki-15071501

Comments

comments

Comments are closed.

Read previous post:
Kinnigoli-14071503
ಕೆಮ್ರಾಲ್ ಹರಿಪಾದ ಸೀಯಾಳಾಭಿಷೇಕ

ಕಿನ್ನಿಗೋಳಿ: ಕೆಮ್ರಾಲ್ ಹರಿಪಾದ ಮಹಾವಿಷ್ಣು ಸನ್ನಿಧಿಯಲ್ಲಿ ಹಿಂದೂ ಜಾಗರಣ ವೇದಿಕೆ, ಶ್ರೀ ಹರಿಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಸೀಯಾಳಾಭಿಷೇಕ ನಡೆಯಿತು. ಈ ಸಂದರ್ಭ ವೆಂಕಟೇಶ ರಾವ್, ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ...

Close