ಎಂಡೋ ಸಲ್ಪಾನ್ ಸಮಸ್ಯೆಯೇ ?

ಮೂಲ್ಕಿ: ಹದಿನೈದು ವರ್ಷದ ಯುವಕ ಆಜಾನುಬಾಹು ಎಂದರೂ ತಪ್ಪೇನಿಲ್ಲ ಆದರೆ ತೆವಳಿಕೊಂಡೇ ಎಲ್ಲೆಡೆ ಸಂಚರಿಸುತ್ತಾನೆ ಮೆದುಳು ಬೆಳೆಯದ ಪರಿಣಾಮ ಮಲ ಮೂತ್ರ ಉಟ್ಟ ಬಟ್ಟೆಯಲ್ಲಿಯೇ ಆಗುತ್ತದೆ, ಆಹಾರ ಸ್ನಾನ ಮುಂತಾದ ಕಾರ್ಯ ಹೆತ್ತವರಿಂದಲೇ ಆಗಬೇಕು ಒಂದು ನಿಮಿಷವೂ ಅವನನ್ನು ಬಿಟ್ಟಿರಲು ಸಾಧ್ಯವಿಲ್ಲ .ಸ್ವಲ್ಪ ಹೆಚ್ಚುಕಮ್ಮಿ ಎನಿಸಿದರೆ ತಲೆಯನ್ನು ರಕ್ತ ಸುರಿಯುವ ವರೆಗೆ ಗೋಡೆಗೆ ಅಥವಾ ಎದುರು ಸಿಕ್ಕಿದ ವಸ್ತುವಿಗೆ ಚಚ್ಚಿ ಕೊಳ್ಳುತ್ತಾನೆ, ಹೆತ್ತವರು ಇವನನ್ನು ಸರಿಪಡಿಸಲು ಮಾಡಿದ ಶತ ಪ್ರಯತ್ನ ಹಾಗೂ 30ಲಕ್ಷಕ್ಕೂ ಅಧಿಕ ಮೊತ್ತ ವ್ಯರ್ಥವಾಗಿದೆ. ಈ ಯುವಕನೂ ಎಂಡೋಸಲ್ಪಾನ್ ಪೀಡಿತನೇ? ಈ ಹುಡುಗನ ಹೆಸರು ಕೆಲ್ವಿನ್ ಮುಂಡ್ಕೂರು ಮುಲ್ಲಡ್ಕ ಗ್ರಾಮದ ತಾಕೊಡೆ ಮನೆ ನಿವಾಸಿ ಚಾಲ್ಸ್ ಡಿಮೆಲ್ಲೋ ಮತ್ತು ಪುತ್ತಿಗೆ ಗ್ರಾಮದ ಸಂಪಿಗೆಯ ಲಿನೆಟ್ ರವರ ಪುತ್ರ 1996ರಲ್ಲಿ ವಿವಾಹವಾದ ಈ ದಂಪತಿಗಳಿಗೆ 1999ರಲ್ಲಿ ಕೆಲ್ವಿನ್‌ನ ಜನನ ಆರಂಭದ 4ತಿಂಗಳು ಸಾಮಾನ್ಯ ಮಗುವಿನಂತೆ ಕಂಡರೂ ವಿಶೇಷ ಚಲನವಲನ ವಿರಲಿಲ್ಲ 6ನೇ ತಿಂಗಳಿಗೆ ತಲೆ ಮಾತ್ರ ದೊಡ್ಡದಾಗಿ ಮಾಂಸದ ಮುದ್ದೆಯಂತೆ ಬೆಳೆದಾಗ ಕಂಗೆಟ್ಟ ದಂಪತಿಗಳು ತಮ್ಮ ಮದ್ಯಮವರ್ಗದ ಆದಾಯವನ್ನು ಮಗನಿಗಾಗಿ ಮುಡಿಪಿಟ್ಟು ಮಂಗಳೂರಿನಿಂದ ಬೆಂಗಳೂರಿನ ವರೆಗೆ ವೈದ್ಯರನ್ನೆಲ್ಲಾ ಸಂಪರ್ಕಿಸಿದರು. ರಾತ್ರಿ ಹಗಲ್ಲೆನ್ನದೆ ಕಿರಿಚುವುದು ಮುಂತಾದ ಸಮಸ್ಯೆಗಳಿಂದ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದರು. ಈ ನಡುವೆ ವೈದ್ಯರು ಮಗುವಿಗೆ ಹೈಪೋಟೆರಾಯಿದ್ಸಮ್ ಎಂಬ ವ್ಯಾದಿ ಗುರುತಿಸಿದರು. ಅದಕ್ಕೆ ಚಿಕಿತ್ಸೆಯಾಯಿತು. ಬಳಿಕ ಹೃದಯ ಸಂಭಂದಿ ಅಪರೇಶನ್ ಗಳಾದವು, ಕಾಲಿನ ಎಲುಬು ಸರಿಪಡಿಸಲು ಚಿಕಿತ್ಸೆಗಳು ನಡೆದವು ಮಂಗಳೂರಿನಲ್ಲಿ ನಡೆಯುವ ಫಿಸಿಯೋ ತೆರಪಿಗಾಗಿ ಸುಮಾರು 1.5 ಕಿಮೀ ಗುಡ್ಡ ಭಾಗದ ಕಿರು ರಸ್ತೆಯಲ್ಲಿ ಇವನನ್ನು ಹೊತ್ತುಕೊಂಡು ಹೋಗ ಬೇಕಿತ್ತು ಇಷ್ಟೆಲ್ಲಾ ಶ್ರಮದ ಪರಿಣಾಮ ಇಂದು ತೆವಳಿಕೊಂಡು ಓಡಾಡುತ್ತಾನೆ ರಾತ್ರಿ ನಿದ್ರಿಸುತ್ತಾನೆ ಹಿಂದೆ ಎಲ್ಲಾ ಸುಮಾರು 10ವರ್ಷ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೇವೆ ಆದರೂ ಇವತ್ತಿಗೂ ತಲೆಯನ್ನು ಗೋಡೆಗೆ ಜಚ್ಚಿಕೊಳ್ಳುತ್ತಾನೆ ತಲೆ ತುಂಬಾ ಗಾಯಗಳ ಕಲೆಗಳು ಇವನು ತಲೆ ಚಚ್ಚಿಕೊಳ್ಳುವ ರಭಸಕ್ಕೆ ತಲೆಗೆ ಹಾಕಿರುವ ಹೆಲ್ಮೆಟ್ ಪುಡಿಯಾಗಿದೆ ಈ ತರ ಮಾಡುತ್ತಿದ್ದರೆ ಹೆತ್ತವರಾದ ನಾವು ಹೇಗೆ ಸಹಿಸಬೇಕು ಎನ್ನುತ್ತಾರೆ ಚಾಲ್ಸ್.
ಎಂಡೋ ಸಲ್ಪಾನ್ ಸಮಸ್ಯೆಯೇ ?
1998ರ ಸಮಯ ಕೆಲ್ವಿನ್‌ನ ತಾಯಿ ಲಿನೆಟ್‌ರವರು ಗರ್ಭಿಣಿಯಾಗಿದ್ದ ಸಮಯ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿರುವ ಅವರ ತಾಯಿ ಮನೆಯಲ್ಲಿ ವಾಸವಾಗಿದ್ದರು. ಈ ಸಂದರ್ಭ ಇವರ ಮನೆ ಹತ್ತಿರದ ಸರ್ಕಾರಿ ಗೇರು ತೋಪಿಗೆ ಹೆಲಿಕಾಪ್ಟರ್ ಉಪಯೋಗಿಸಿ ಕೀಟನಾಶಕ ಸ್ಪ್ರೇ ಮಾಡಲಾಗುತ್ತಿತ್ತು. ಉಳಿದ ಎಂಡೊ ಪೀಟಿತ ಮಕ್ಕಳಂತೆ ಕೆಲ್ವಿನ್‌ಗೂ ಎಂಡೋ ಸಲ್ಪಾನ್ ಸಮಸ್ಯೆ ಉಂಟಾಗಿರ ಬಹುದೇ ಎಂಬ ಶಂಕೆ ಈ ದಂಪತಿಗಳನ್ನು ಕಾಡುತ್ತಿದೆ.
ಬಟ್ಟೆ ಅಂಗಡಿಯಲ್ಲಿ ಕೆಲಸಮಾಡುವ ಚಾಲ್ಸ್ ನಿವೃತ್ತಿಯ ಅಂಚಿಗೆ ತಲುಪುತ್ತಿದ್ದಾರೆ. ಸ್ನೇಹಿತರ ಸಹೃದಯಿಗಳ ಸಹಕಾರ ಪಿತ್ರಾರ್ಜಿತ ಭೂಮಿಯನ್ನು ಮಾರಾಟಮಾಡಿ ಮಗು ಗುಣಮುಖವಾಗಲು ಹೋರಾಟ ನಡೆಸಿದ್ದೇವೆ.ಅವನ ಸುವ್ಯವಸ್ಥೆಗಾಗಿ ನಮ್ಮ ಹಳೆಮನೆ ಯಿಂದ ತಮ್ಮನ ಮನೆಯಲ್ಲಿ ವಾಸವಾಗಿದ್ದೇವೆ, ಇದೀಗ ಅವನು ಬೆಳೆದಿದ್ದು ಷ ಎತ್ತಲುಕೂಡಾ ನಮ್ಮಿಂದ ಆಗುತ್ತಿಲ್ಲ ಮುಂದೇನು ಎಂಬ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂಬ ಚಿಂತೆ ವ್ಯಕ್ತ ಪಡಿಸುತ್ತಿದ್ದಾರೆ ಚಾಲ್ಸ್ ದಂಪತಿಗಳು.
ಬಹಳಷ್ಟು ಕಷ್ಟ ಪಡುವ ದಂಪತಿಗಳಿಗೆ ಆರೋಗ್ಯ ಸಚಿವರು ಮತ್ತು ಸಂಸದರು ಹಾಗೂ ಸರ್ಕಾರಿ ಇಲಾಖೆ ಸಹಾಯ ಹಸ್ತ ನೀಡಬೇಕಾಗಿದೆ ಕೆಲ್ವಿನ್ ಜೀವಮೋಪಾಯದ ಶಾಶ್ವತ ವ್ಯವಸ್ಥೆಯಾಗ ಬೇಕಿದೆ ಈ ಬಗ್ಗೆ ಜನ ಪ್ರತಿನಿಧಿಗಳು ಹಾಗೂ ಸಮಾಜ ಸೇವಾ ಸಂಸ್ಥೆಗಳು ಸಹಕಾರ ನೀಡಬೇಕಾಗಿದೆ. ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸ ಬಹುದು: ಚಾಲ್ಸ್ ಡಿಮೆಲ್ಲೊ,ತಾಕೊಡೆ ಮನೆ,ಮುಲ್ಲಡ್ಕ ಗ್ರಾಮ, ಮುಂಡ್ಕೂರು, ಕಾರ್ಕಳ. ಫೋನ್:996402827

ಜೀವನದ ಅರ್ಧ ಕೆಲ್ವಿನ್ ಸೇವೆಯಲ್ಲಿಯೇ ಕಳೆಯಿತು ಅದಾಯಕ್ಕಿಂತ ಹೆಚ್ಚು ಖರ್ಚು ಕೆಲ್ವಿನ್‌ಗೆ ಆಗಿರುವ ಕಾರಣ ಸಾಲ ಹಾಗೂ ಸಮಸ್ಯೆಗಳು ಹಲವಿವೆ ಹೀಗೆ ಮುಂದುವರಿದರೆ ಮುಂದೇನು ಎಂಬ ಸಮಸ್ಯೆ ಕಾಡುತ್ತಿದೆ.. . . ಚಾಲ್ಸ್ ಡಿಮೆಲ್ಲೊ ಕೆಲ್ವಿನ್ ತಂದೆ.

Bhagyavan Sanil

Mulki-16071504 Mulki-16071505

Comments

comments

Comments are closed.

Read previous post:
Mulki-16071501
ಪಡುಪಣಂಬೂರು: ಮನೆಯಲ್ಲಿ ಕಳವು

ಮೂಲ್ಕಿ : ಮೂಲ್ಕಿ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬೆಳ್ಳಾಯರು ಮೂಡುತೋಟ ಜಾರಂದಾಯ ದೈವಸ್ಥಾನದ ಬಳಿ ಇರುವ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ನಡೆದ ಬಗ್ಗೆ ಮೂಲ್ಕಿ...

Close