ಪಡುಪಣಂಬೂರು: ಮನೆಯಲ್ಲಿ ಕಳವು

ಮೂಲ್ಕಿ : ಮೂಲ್ಕಿ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬೆಳ್ಳಾಯರು ಮೂಡುತೋಟ ಜಾರಂದಾಯ ದೈವಸ್ಥಾನದ ಬಳಿ ಇರುವ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ನಡೆದ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತ: ಮುಂಬಯಿಯಲ್ಲಿ ವಾಸವಾಗಿರುವ ಲಕ್ಷ್ಮಣ ಶೆಟ್ಟಿ ಎಂಬವರ ಪಡುಪಣಂಬೂರಿನ ಪಡುತೋಟದ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನ ನಡೆದಿದೆ. ಮನೆ ಮುಂಬಾಗದ ಬಾಗಿಲಿನ ಬೀಗ ಮುರಿದು ಕಳ್ಳರು ಒಳಹೊಕ್ಕಿದ್ದಾರೆ. ಡ್ರಾವರಿನಲ್ಲಿರುವ ಕಪಾಟಿನ ಬೀಗದಿಂದ ಕಪಾಟನ್ನು ಜಾಲಾಡಿ ಕಪಾಟಿನಲ್ಲಿದ್ದ ಹಣವನ್ನು ಕಳ್ಳತನ ಮಾಡಲಾಗಿದೆ.
ಮನೆಯಲ್ಲಿದ್ದ ಬೆಲೆಬಾಳುವ ಬೆಳ್ಳಿ ಪಾತ್ರೆಗಳನ್ನು ಹಾಗೆಯೇ ಬಿಟ್ಟು ಹೋಗಿರುವ ಕಳ್ಳರು ಕೇವಲ ಹಣ ಮಾತ್ರ ಕಳ್ಳತನ ಮಾಡಿದ್ದಾರೆ. ಬೆಳ್ಳಿ ಪಾತ್ರೆ ಕಳ್ಳತನ ಮಾಡಿ ಮಾರಾಟ ಮಾಡುವಾಗ ಸಿಕ್ಕಿ ಬಿದ್ದರೆ ಎಂಬ ಮುಂಜಾಗರೂಕತೆಯಿಂದ ಕಳ್ಳರು ಹಾಗೇಯೇ ಬಿಟ್ಟು ಹೋಗಿರಬಹುದು ಎಂದು ಸಂಶಯಿಸಲಾಗಿದೆ. ಮನೆಯನ್ನು ನೆರೆಮನೆಯವರು ನೋಡಿಕೊಳ್ಳುತ್ತಿದ್ದು ಎಂದಿನಂತೆ ಬೆಳಗ್ಗೆ ಬಂದು ನೋಡುವಾಗ ಈ ಕಳ್ಳತನ ಬಯಲಿಗೆ ಬಂದಿದೆ. ಇತ್ತೀಚೆಗೆ ಮಳೆಗಾಲದ ಸಮಯದಲ್ಲಿ ಪಡುಪಣಂಬೂರು ಪರಿಸರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಜನರು ಜಾಗೃತರಾಗಿರುವಂತೆ ಪೋಲೀಸರು ಸೂಚಿಸಿದ್ದಾರೆ.ಮೂಲ್ಕಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Puneethkrishna

Mulki-16071501 Mulki-16071502 Mulki-16071503 Mulki-16071504

Comments

comments

Comments are closed.

Read previous post:
Kinnigoli-15071503
ಕಟೀಲು ಬೊಂಡಾಭಿಷೇಕ

On wednesday morning, Devotees of  Attur Kodetturu  offered siyala-abhisheka to Sri durgaparameshwari devi of Kateel temple. ಕಟೀಲು: ಪುರಾಣ ಪ್ರಸಿದ್ದ ಕಟೀಲು...

Close