ಆಕ್ಟಿವಾ-ಮಿನಿ ಬಸ್ಸು ಡಿಕ್ಕಿ

ಕಿನ್ನಿಗೋಳಿ : ಮುಲ್ಕಿ-ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕಿನ್ನಿಗೋಳಿಯ ರಾಜಾಂಗಣದ ಬಳಿ ಕಟೀಲಿನಿಂದ ಮೂಲ್ಕಿ ಕಡೆಗೆ ಹೋಗುತ್ತಿದ್ದ ಮಿನಿ ಬಸ್ಸು ಮತ್ತು ಹೊಂಡ ಆಕ್ಟಿವಾ ಸ್ಕೂಟರು ಪರಸ್ಪರ ಕೂದಳತೆಯಲ್ಲಿ ಡಿಕ್ಕಿ ಹೊಡೆದ ಪರಿಣಾಮ ಯುವತಿಯರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಬೈಕಂಪಾಡಿಯಿಂದ ಕಟೀಲಿಗೆ ಬಂದು ಕಿನ್ನಿಗೋಳಿ ಮುಲ್ಕಿ ಮೂಲಕ ಮುರುಡೇಶ್ವರ ಪ್ರವಾಸಿ ತಾಣಕ್ಕೆ ಹೋಗುತ್ತಿದ್ದ ಟೂರಿಸ್ಟ್ ಮಿನಿಬಸ್ಸು ಮತ್ತು ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಸ್ಕೂಟರಿಗೆ ಕೂದಳತೆಯ ಅಂತರದಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತವನ್ನು ತಪ್ಪಿಸಲು ಪ್ರಯತ್ನ ಪಟ್ಟ ಬಸ್ಸು ಚರಂಡಿಗೆ ಇಳಿದಿದೆ. ಡಿಕ್ಕಿ ಹೊಡೆದ ಸಂದರ್ಭ ಸ್ಕೂಟರ್ ಚಲಾಯಿಸುತ್ತಿದ್ದ ಯುವತಿ ಆಯ ತಪ್ಪಿ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಮೂಲ್ಕಿ ಸಮೀಪದ ಕೆರೆಕಾಡು ನಿವಾಸಿಗಳಾದ ಶುಭ ಆಚಾರ್ಯರ ಸ್ಥಿತಿ ಗಂಭೀರವಾಗಿದ್ದು ಹಾಗೂ ಮಮತಾ ಆಚಾರ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಪೋಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

Kinnigoli : Two woman were seriously injured in Minibus – Scooter collision in Kinnigoli near Rajangana hall on Saturday July 18 morning.  The two wheeler riders Shobha Acharya and Mamata Acharya are the injured ladies. Mangalore North traffic police rushed to the spot investigation.

Kinnigoli-18071507 Kinnigoli-18071508 Kinnigoli-18071509 Kinnigoli-18071510

Comments

comments

Comments are closed.

Read previous post:
Kinnigoli-18071504
ಕಿನ್ನಿಗೋಳಿ ಸೌಹಾರ್ಧ ಇಪ್ತಾರ್ ಕೂಟ

Kinnigoli Bus drivers and conductors association organized Ifthar Koota at kinnigoli Swagath Hall ಕಿನ್ನಿಗೋಳಿ : ಸ್ನೇಹ ಸೌಹಾರ್ಧತೆಯ ಸಂಸ್ಕೃತಿ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿದಾಗ...

Close