ಪಂಜ ನೆರೆಭೀತಿ

ಕಿನ್ನಿಗೋಳಿ: ಕಳೆದ ಎರಡು ದಿನಗಳಿಂದ ನಿರಂತರ ಮಳೆ ಬಂದು ನೆರೆ ಭೀತಿ ಉಂಟು ಮಾಡಿದ ಕಿನ್ನಿಗೋಳಿ ಬಳಿಯ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಂಜ , ಉಲ್ಯ ಪ್ರದೇಶದಲ್ಲಿ ನಂದಿನಿ ನದಿ ಉಕ್ಕಿ ಹರಿದು ಪಂಜ ಬೈಲಗುತ್ತು ಪ್ರದೇಶದ ಸುತ್ತಮುತ್ತ ಮನೆಗಳು ಜಲಾವೃತಗೊಂಡು ಸಂಚಾರಕ್ಕೆ ದೋಣಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಪಂಜ ಬೈಲಗುತ್ತು ಪ್ರದೇಶದಲ್ಲಿ ನೆರೆ ನೀರು ಬಂದು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಗದ್ದೆ ಬದಿಗಳ ತಡೆಗೋಡೆಗಳು ಹಾನಿಯಾಗಿವೆ. ಕಿನ್ನಿಗೋಳಿ ಪಕ್ಷಿಕೆರೆ ಪಂಜದಿಂದ ಖಡ್ಗೇಶ್ವರಿ ದೇವಳವನ್ನು ಸಂಪರ್ಕಿಸುವ ಹೊಸ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದೆ.

Kinnigoli-20071507 Kinnigoli-20071508 Kinnigoli-20071509

Comments

comments

Comments are closed.

Read previous post:
Mulki-20071506
ಮೂಲ್ಕಿ- ಪರಿಸರದಲ್ಲಿ ಭಾರೀ ಮಳೆ

ಮೂಲ್ಕಿ: ಕಿನ್ನಿಗೋಳಿ ಮೂಲ್ಕಿ ಕಟೀಲು ಪರಿಸರದಲ್ಲಿ ಭಾರೀ ಮಳೆ. ಮಳೆಯಿಂದ ಪಾವಂಜೆ, ಕಿನ್ನಿಗೋಳಿ, ಕಿಲೆಂಜೂರು, ಹಳೆಯಂಗಡಿ, ಪಡುಪಣಂಬೂರು, ಶಿಮಂತೂರು, ಕಟೀಲು ಪರಿಸರದಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ. ಮೂಲ್ಕಿ...

Close