ಮೂಲ್ಕಿ- ಪರಿಸರದಲ್ಲಿ ಭಾರೀ ಮಳೆ

ಮೂಲ್ಕಿ: ಕಿನ್ನಿಗೋಳಿ ಮೂಲ್ಕಿ ಕಟೀಲು ಪರಿಸರದಲ್ಲಿ ಭಾರೀ ಮಳೆ. ಮಳೆಯಿಂದ ಪಾವಂಜೆ, ಕಿನ್ನಿಗೋಳಿ, ಕಿಲೆಂಜೂರು, ಹಳೆಯಂಗಡಿ, ಪಡುಪಣಂಬೂರು, ಶಿಮಂತೂರು, ಕಟೀಲು ಪರಿಸರದಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ. ಮೂಲ್ಕಿ ಬಸ್ಸು ನಿಲ್ದಾಣದ ಬಳಿಯ ಹೋಟೇಲೊಂದರ ಬದಿಯಲ್ಲಿ ಕೃತಕ ನೆರೆ ಕಾಣಿಸಿಕೊಂಡು ಪಂಚಮಹಲ್ ಬಳಿ ಮಲಿನ ನೀರು ನಿಂತು ಕೃತಕನೆರೆಯಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಶಿಮಂತೂರು ದೇವಸ್ಥಾನ, ಕೊಲೆಕಾಡಿ ಪರಿಸರದ ಗದ್ದೆಗಳು ಕೃತಕ ನೆರೆಯಿಂದ ಜಲಾವೃತವಾಗಿದೆ. ಕಟೀಲಿನ ನಂದಿನಿ ನದಿ ಬೋರ್ಗರೆಯುತ್ತಿದ್ದು ಕೊಡೆತ್ತೂರು ಪರಿಸರದಲ್ಲಿ ತಗ್ಗು ಪ್ರದೇಶದಲ್ಲಿ ನೆರೆ ಕಾಣಿಸಿಕೊಂಡಿದೆ.
ಮೂಲ್ಕಿ ಸಮೀಪ ಕೊಲೆಕಾಡಿ ಕೆಂಪುಗುಡ್ಡೆ ಮಾನಂಪಾಡಿ ಬಳಿ ಬಾರೀ ಮಳೆಯಿಂದ ಕೃತಕ ನೆರೆ ಕಾಣಿಸಿಕೊಂಡು ಮನೆಗೆ ನೀರು ನುಗ್ಗಿದೆ. ಮಾನಂಪಾಡಿ ಸೇತುವೆಯ ಮೇಲೆ ನೆರೆ ಕಾಣಿಸಿಕೊಂಡು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಅನೇಕ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ ಎಂದು ಸ್ಥಳೀಯ ಕೃಷಿಕ ಮಾದವ ಪೂಜಾರಿ ತಿಳಿಸಿದ್ದಾರೆ.

Puneethakrishna

Mulki-20071505 Mulki-20071506

Comments

comments

Comments are closed.

Read previous post:
Mulki-20071503
13ನೇ ವರ್ಷದ ಆಟಿಡೊಂಜಿ ದಿನ

ಮೂಲ್ಕಿ: ಹಿಂದಿನ ಕಾಲದಲ್ಲಿ ಆಟಿ ತಿಂಗಳು ಕಷ್ಟದ ಕಾಲವಾಗಿದ್ದು ಪ್ರಕೃತಿಗಳಿಂದ ಸಿಗುವ ವಸ್ತುಗಳಿಂದ ಜೀವನ ಸಾಗಿಸುವಂತಹ ಪರಿಸ್ಥಿತಿಯಿದ್ದು ಆಧುನಿಕತೆಯ ಇಂದಿನ ದಿನಗಳಲ್ಲಿ ಸಮಾಜಕ್ಕೆ ನಮ್ಮ ಆಚಾರ,ವಿಚಾರ ಪರಂಪರೆಗಳ...

Close