ಸಹಾಯ ಧನ ವಿತರಣೆ

ಮೂಲ್ಕಿ: ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ರಾಜ್ಯ ಸರ್ಕಾರವು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದು ಸರ್ಕಾರದ ಹಲವಾರು ಜನಪರ ಯೋಜನೆಗಳ ಬಗ್ಗೆ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ನಗರ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಅವರ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗೆ ಮೂಲ್ಕಿ ಹೋಬಳಿಯ 10 ಮಂದಿಗೆ ರೂ 2.67 ಲಕ್ಷ ಸಹಾಯ ಧನ ವಿತರಿಸಿ ಮಾತನಾಡಿದದು. ಮತ್ತು ಮೂಲ್ಕಿ ನಗರ ಪಂಚಾಯಿತಿ ಸಮುದಾಯ ಭವನಕ್ಕೆ ರೂ 5 ಲಕ್ಷ ವೆಚ್ಚದಲ್ಲಿ ನೆಲಕ್ಕೆ ಮರದ ಹಾಸನ್ನು ಹಾಕಲಾಗುವುದು ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಮೂಲ್ಕಿಯಲ್ಲಿ 29 ಲಕ್ಷ ವೆಚ್ಚದ ಸ್ಕೇಟಿಂಗ್ ಯಾಡ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಾಗಾರಿ ಆರಂಭಗೊಳ್ಳಲಿದೆಯೆಂದು ತಿಳಿಸಿದರು.
ಕಿಲ್ಪಾಡಿ ಪಂಚಾಯಿತಿ ಸದಸ್ಯ ಗೋಪಿನಾಥ ಪಡಂಗ, ಹಳೆಯಂಗಡಿ ಪಂಚಾಯಿತಿ ಸದಸ್ಯ ಎಚ್ ವಸಂತ ಬೆರ್ನಾಡ್, ಸದಾಶಿವ ಸಾಲ್ಯಾನ್ ಪೈಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ಉಪ ತಹಶೀಲ್ದಾರ್ ಸೀತಾರಾಮ ಸ್ವಾಗತಿಸಿದರು, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್ ವಂದಿಸಿದರು.

Prakash Suvarna

Mulki-20071502

Comments

comments

Comments are closed.

Read previous post:
Mulki-20071501
ಪಾವಂಜೆ: ಪ್ರಶಸ್ತಿ ಪ್ರಧಾನ

ಮುಲ್ಕಿ: ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ಶೇಣಿ ಗೋಪಾಲಕೃಷ್ಣ ವಿಶ್ವಸ್ಥ ಮಂಡಳಿಯಿಂದ ಖ್ಯಾತ ಭಾಗವತ ಪ್ರಸಂಗಕರ್ತ ಹೊಸತೋಟ ಮಂಜುನಾಥ ಭಾಗವತರಿಗೆ ಶೇಣಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು....

Close