13ನೇ ವರ್ಷದ ಆಟಿಡೊಂಜಿ ದಿನ

ಮೂಲ್ಕಿ: ಹಿಂದಿನ ಕಾಲದಲ್ಲಿ ಆಟಿ ತಿಂಗಳು ಕಷ್ಟದ ಕಾಲವಾಗಿದ್ದು ಪ್ರಕೃತಿಗಳಿಂದ ಸಿಗುವ ವಸ್ತುಗಳಿಂದ ಜೀವನ ಸಾಗಿಸುವಂತಹ ಪರಿಸ್ಥಿತಿಯಿದ್ದು ಆಧುನಿಕತೆಯ ಇಂದಿನ ದಿನಗಳಲ್ಲಿ ಸಮಾಜಕ್ಕೆ ನಮ್ಮ ಆಚಾರ,ವಿಚಾರ ಪರಂಪರೆಗಳ ಬಗ್ಗೆ ತಿಳಿಸುವ ಕಾರ್ಯವಾಗಬೇಕಾಗಿದ್ದು ತುಳು ಸಾಹಿತ್ಯ ಆಕಾಡೆಮಿ ಮೂಲಕ ತುಳು ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಗ್ರಾಮೀಣ ಮಟ್ಟದಲ್ಲಿ ತಿಳಿಸುವ ಕಾರ್ಯವಾಗುತ್ತಿದೆಯೆಂದು ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಹೇಳಿದರು.
ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಮೂಲ್ಕಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರಗಿದ 13ನೇ ವರ್ಷದ ಆಟಿದೊಂಜಿ ದಿನ ಕಾರ್ಯಕ್ರಮವನ್ನು ತುಳುನಾಡಿನ ವಿಶಿಷ್ಟ ತಿಂಡಿಯಾದ ಹಲಸಿನ ಹಣ್ಣಿನ ಗಟ್ಟಿಯನ್ನು ತೆಗೆದು ತುಂಡು ಮಾಡಿ ಹಂಚುವ ಮೂಲಕ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪ್ರೇಮ್ ನಾಥ್ ಕೆ ಬಂಟ್ವಾಳ ವಹಿಸಿದರು.
ಆಟಿ ತಿಂಗಳ ಮಹತ್ವದ ಕುರಿತು ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಮಾತನಾಡಿದರು.
ಪಡುಬಿದ್ರಿ ಅಂಚನ್ ಆಯುರ್ವೇದಿಕ್ ಇಂಡಸ್ಟ್ರೀಸ್ ಮಾಲಕ ಡಾ. ಎನ್ ಟಿ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್, ಮೂಲ್ಕಿ ಕಾರ್ನಾಡು ಹರಿಹರ ಕ್ಷೇತ್ರ ಆಡಳಿತ ಮೊಕ್ತೇಸರ ಎಂ ಎಚ್ ಅರವಿಂದ ಪೂಂಜ, ಯುವವಾಹಿನಿ ಘಟಕ ಅಧ್ಯಕ್ಷ ಎಚ್ ಸತೀಶ್ ಕುಮಾರ್, ನರೇಂದ್ರ ಕೆರೆಕಾಡು, ಕಾರ್ಯದರ್ಶಿ ಭಾಸ್ಕರ ಕೋಟ್ಯಾನ್, ವಿಜಯ ಕುಮಾರ್ ಕುಬೆವೂರು ಮತ್ತು ಉದಯ ಅಮೀನ್ ಉಪಸ್ಥಿತರಿದ್ದರು.

Prakash Suvarna

Mulki-20071503 Mulki-20071504

Comments

comments

Comments are closed.

Read previous post:
Mulki-20071502
ಸಹಾಯ ಧನ ವಿತರಣೆ

ಮೂಲ್ಕಿ: ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ರಾಜ್ಯ ಸರ್ಕಾರವು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದು ಸರ್ಕಾರದ ಹಲವಾರು ಜನಪರ ಯೋಜನೆಗಳ ಬಗ್ಗೆ ಅಧಿಕಾರಿಗಳು ಜನರಿಗೆ ಮಾಹಿತಿ...

Close