ಸಮಯ ಪರಿಪಾಲನೆ, ಶ್ರದ್ಧೆ ಜೀವನದ ಯಶಸ್ಸು

ಕಿನ್ನಿಗೋಳಿ: ಸಮಯದ ಪರಿಪಾಲನೆ, ಶ್ರದ್ಧೆ ಜೀವನವನ್ನು ಯಶಸ್ಸಿನತ್ತ ಮುನ್ನಡೆಸಬಲ್ಲುದು. ಎಂದು ಮುಂಡ್ಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಹೇಳಿದರು.
ಐಕಳ ಪೊಂಪೈ ಕಾಲೇಜು ಮಾನವಿಕ ಸಂಘದ 2015-16ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಥೋಮಸ್ ಜಿ ಎಮ್, ಸಮಾಜಶಾಸ್ತ್ರ ವಿಭಾಗದ ಪ್ರೊ. ಯೋಗೀಂದ್ರ ಬಿ ಹಾಗೂ ಇತಿಹಾಸ ಪ್ರಾಧ್ಯಾಪಕ ವಿಶ್ವಿತ್ ಶೆಟ್ಟಿ , ವಿದ್ಯಾರ್ಥಿ ಮುಖಂಡರಾದ ಸಂದೇಶ ಹಾಗೂ ಕಾವ್ಯ ಉಪಸ್ಥಿತರಿದ್ದರು.
ರೋಷನ್ ಪಿರೇರಾ ಹಾಗೂ ಗ್ಲೋರಿಯ ಪಿಂಟೊ ಕಾರ್ಯಕ್ರಮ ನಿರೂಪಿಸಿ ಭರತ್ ರಾಜ್ ಸ್ವಾಗತಿಸಿ ಸಿ. ಶಾಂತಿಪ್ರಿಯ ಧನ್ಯವಾದವಿತ್ತರು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹೂ ಗುಚ್ಛ ನೀಡಿ ಸ್ವಾಗತಿಸಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Kinnigoli-21071503

Comments

comments

Comments are closed.

Read previous post:
Kinnigoli-21071502
ಸುಂದರ ಪೂಜಾರಿ ಚಿಕಿತ್ಸೆಗೆ ಸಹಾಯ

ಕಿನ್ನಿಗೋಳಿ: ಅನಾರೋಗ್ಯ ಪೀಡಿತ ಕೆಮ್ರಾಲ್ ಕೊಯಿಕುಡೆಯ ಸುಂದರ ಪೂಜಾರಿ ಅವರ ಚಿಕಿತ್ಸೆಗೆ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್, ಹಿಂದೂ ಜಾಗರಣ ವೇದಿಕೆ ಹರಿಪಾದೆ ಘಟಕಗಳ ವತಿಯಿಂದ ಧನ...

Close