ಕುಸಿಯುವ ಭೀತಿಯಲ್ಲಿ ಕಾಲು ಸಂಕ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಲಕ್ಷ್ಮೀ ಜನಾರ್ಧನ ದೇವಳದ ಸಮೀಪದಲ್ಲಿ ಐದು ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ ಸುಮಾರು ಒಂದೂವರೆ ಲಕ್ಷ ಅನುದಾನದಿಂದ ನಿರ್ಮಿಸಿದ ಕಾಲು ಸಂಕ ಹೋದ ವರ್ಷದಿಂದ ಶಿಥಿಲಾವಸ್ಥೆಯತ್ತ ಸಾಗುತ್ತಿದೆ ಈ ಸಲದ ಮಳೆಗಾಲದಲ್ಲಿ ಕಾಲು ಸಂಕದ ಅಡಿಯಲ್ಲಿ ಹೊಂಡವೊಂದು ನಿರ್ಮಾಣವಾಗಿ ಕಟ್ಟದ್ದ ಕಲ್ಲುಗಳು ಸಡಿಲಗೊಂಡು ಕುಸಿಯುವ ಭೀತಿಯಲ್ಲಿದೆ. ಏಳಿಂಜೆ ಗ್ರ್ರಾಮಸ್ಥರ ಕಾಲು ಸಂಕದ ಬೇಡಿಕೆ ಹುಸಿಯಗುವ ನಿರೀಕ್ಷೆಯಲ್ಲಿದೆ.

ಏಳಿಂಜೆ ಪಟ್ಟೆ ಗ್ರಾಮಗಳ ಗದ್ದೆಗಳ ಮಧ್ಯೆ ಹೊಳೆಗೆ ನಿರ್ಮಿಸಿರುವ ಕಾಲು ಸಂಕ ಅಪಾಯಕಾರಿಯಾಗಿದೆ. ಈ ಭಾಗದಲ್ಲಿ ಹೆಚ್ಚು ಮಳೆಯಾದಾಗ ಕಾಲು ಸಂಕದ ತಗ್ಗಿನಲ್ಲಿರುವ ಪ್ರದೇಶದಲ್ಲಿ ನೀರು ಉಕ್ಕಿ ಹರಿಯುತ್ತದೆ. ಕಳೆದ ವರ್ಷ ಹಾಗೂ ಈ ವರ್ಷ ಸುರಿದ ಭಾರೀ ಮಳೆಯಲ್ಲಿ ನೀರು ಉಕ್ಕಿ ಹರಿದು ಕಾಲು ಸಂಕದ ಒಂದು ಭಾಗ ಕುಸಿದು ಗುಹೆ ರೀತಿಯಲ್ಲಿ ಮಾರ್ಪಾಡಾಗಿ ಕಾಲು ಸಂಕ ಸಂಪೂರ್ಣ ಕುಸಿಯುವ ಮೊದಲು ದುರಸ್ತಿಗೊಳಿಸಬೇಕಾಗಿದೆ. ಕಾಲು ಸಂಕ ಕುಸಿದರೆ ಗ್ರಾಮಸ್ಥರು ಸುತ್ತು ಬಳಸಿ ಪಟ್ಟೆ ಗ್ರಾಮಕ್ಕೆ ಎರಡು ಕಿಲೋಮೀಟರ್ ದೂರದ ಹಾದಿ ಬಳಸಿ ಹೋಗುವಂತ ಪ್ರಮೇಯ ಬರಲಿದೆ.
ಮಳೆಗಾಲದಲ್ಲಿ ಪರದಾಟ
ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಹೊಳೆಯಿಂದಾಗಿ ಜನರು ಸಂಕ ದಾಟಲು ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಸಂಕ ದಾಟಲು ಹತ್ತಿರದ ತೋಟ ಗದ್ದೆಗಳ ಹಳಿಯ ಮೇಲೆ ಜಾಗರೂಕವಾಗಿ ನಡೆಯ ಬೇಕಾಗುತ್ತದೆ. ಪಟ್ಟೆ ಭಾಗದ ಜನರಿಗೆ ತೀರ ಹತ್ತಿರ ಕಲ್ಪಿಸುವ ತುಂಬ ಉಪಯುಕ್ತ ಮಾರ್ಗವಿದು. ಪಟ್ಟೆ ಗ್ರಾಮದ ಶಾಲಾ ಮಕ್ಕಳು ಹಾಗೂ ದುಡಿಮೆಗಾರರು ಇದೇ ಸಂಕ ಬಳಸುತ್ತಾರೆ. ದಾಟುವಾಗ ಪ್ರತಿ ಹೆಜ್ಜೆಯೂ ಅಪಾಯದ ಸಂಕೇತ ನೀಡುತ್ತದೆ. ಆಯ ತಪ್ಪಿದರೆ ಅವಘಡ ನಿಶ್ಚಿತ.

ಹಿಂದಿನ ಗ್ರಾಮ ಸಭೆಗಳಲ್ಲಿಯೂ ಇದರ ಬಗ್ಗೆ ಗ್ರಾಮಸ್ತರು ಗ್ರಾಮ ಸಭೆಗಳಲ್ಲಿ ತಮ್ಮ ಅಹವಾಲನ್ನು ಮಂಡಿಸಿದ್ದರು. ಅವ್ಶೆಜ್ಞಾನಿಕ ರೀತಿಯಲ್ಲಿ ಕಾಲು ಸಂಕದ ಕಾಮಗಾರಿ ನಿರ್ಮಿಸಿರುವುದು ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ಕಾಲು ಸಂಕದ ಇಳಿಜಾರಿನ ಪ್ರ್ರದೇಶವನ್ನು ಇನ್ನೂ ದೂರಕ್ಕೆ ಎತ್ತರಿಸಿ ಕಟ್ಟಿಸಿದ್ದರೆ. ಇಂತಹ ಪರಿಸ್ಥಿತಿ ಬರುತ್ತಿರಲ್ಲಿಲ್ಲ, ಹೊಳೆಯ ತಿರುವು ಕಾಲು ಸಂಕದ ಬಳಿಯಲ್ಲಿರುವುದು ಹಾಗೂ ಹೊಳೆಯಲ್ಲಿ ಸೆಳೆತ ಜಾಸ್ತಿ ಇರುವುದರಿಂದ ಸಂಕದ ಸಾರ್ಮಾಥ್ಯ ಕಡಿಮೆಯಾಗಿರುವುದು ಕಾಲು ಸಂಕದ ಕೊರೆತಕ್ಕೆ ಕಾರಣವಾಗಿದೆ.
ಸ್ಥಳೀಯ ಐಕಳ ಗ್ರಾಮ ಪಂಚಾಯಿತಿ ಜವಾಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಿ ಕಾಲು ಸಂಕದ ದುರಸ್ತಿ ಶೀಘ್ರ ನೆರವೇರಿಸಲೇಬೇಕಾಗಿದೆ.

ಸ್ಥಳೀಯರ ಕನಸು ಭಗ್ನಗೊಳ್ಳದಂತೆ ಮಾಡುವುದು ಜಿಲ್ಲಾಡಳಿತದ ಕಾರ್ಯವಾಗಬೇಕು. ಹಿಂದಿನ ಮರಮಟ್ಟಿನ ಸಂಕವನ್ನು ದಾಟುವ ಕಾಯಕ ಜನರಲ್ಲಿ ಬರದಂತೆ ನೋಡಿಕೊಳ್ಳುವುದು ಜನ ಪ್ರತಿನಿಗಳ ಕರ್ತವ್ಯ ಜನರಿಗೆ ಕಂಟಕದಂತೆ ಕಾಡುವ ಈ ಸಂಕದ ಕಾಟವನ್ನು ದೂರ ಮಾಡಬೇಕು
ಸುದೀರ್ ಸುವರ್ಣ ಪಟ್ಟೆ.
ಸ್ಥಳೀಯ ಗ್ರಾಮಸ್ಥರು.

ಪ್ರಸ್ತುತ ಇರುವ ಕಾಲು ಸಂಕವನ್ನು ವಿಸ್ತರಿಸಿ ಸಮಸ್ಯೆಯನ್ನು ನಿವಾರಿಸಬೇಕಾಗಿದೆ.
ಐಕಳ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಆದಷ್ಟು ಬೇಗ ಸಂಕದ ದುರಸ್ತಿ ಕಾರ್ಯ ಆಗಬೇಕಾಗಿದೆ.
ರವೀಂದ್ರ ಸುವರ್ಣ ಪಟ್ಟೆ
ಐಕಳ ಗ್ರಾಮ ಪಂಚಾಯಿತಿ ಸದಸ್ಯ

Kinnigoli-22071503 Kinnigoli-22071504 Kinnigoli-22071505

Comments

comments

Comments are closed.

Read previous post:
Kinnigoli-22071502
ದಾಮಸ್‌ಕಟ್ಟೆ ಆವರಣ ಗೋಡೆ ಕುಸಿತ

ಕಿನ್ನಿಗೋಳಿ : ಕಳೆದರೆಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಪ್ರವೀಣ್ ಸಾಲ್ಯಾನ್ ಅವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಕಳೆದ ವರ್ಷ ಇಲ್ಲಿನ...

Close