ದಾಮಸ್‌ಕಟ್ಟೆ ಆವರಣ ಗೋಡೆ ಕುಸಿತ

ಕಿನ್ನಿಗೋಳಿ : ಕಳೆದರೆಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಪ್ರವೀಣ್ ಸಾಲ್ಯಾನ್ ಅವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಕಳೆದ ವರ್ಷ ಇಲ್ಲಿನ ರಾಜ್ಯ ಹೆದ್ದಾರಿಯ ರಸ್ತೆಯನ್ನು ಎತ್ತರಿಸಿ ನಿರ್ಮಿಸಿದ ಕಾರಣ ಕಳೆದ ಬಾರಿಯೂ ಮಳೆಗಾಲದ ಸಂದರ್ಭ ಕೃತಕ ನೆರೆಯಿಂದಾಗಿ ತೋಡಿನಿಂದ ನೇರವಾಗಿ ಮನೆಯ ಕಡೆಗೆ ಬಂದ ನೀರಿನಿಂದಾಗಿ ಮನೆಯ ಬಲ ಬದಿಯ ಅವರಣ ಗೋಡೆ ಕುಸಿದು ಬಿದ್ದು ಸಾವಿರಾರು ರೂಪಾಯಿ ನಷ್ಟ ಉಂಟಾಗಿತ್ತು.
ನಿರಂತರ ಮಳೆ ಸುರಿಯುತ್ತಿದ್ದ ಕಾರಣ ರಾಜ್ಯ ಹೆದ್ದಾರಿಯ ರಸ್ತೆಯ ಸಮೀಪದ ಚರಂಡಿ ನೀರು ಸರಿಯಾಗಿ ಹರಿದು ಹೋಗದೆ ನೇರವಾಗಿ ಪ್ರವೀಣ್ ಅವರ ಮನೆಯ ಅಂಗಳಕ್ಕೆ ಬಂದಿದ್ದು ಅವರ ಅಂಗಳದಲ್ಲಿ ಸುಮಾರು ಎರಡೂವರೆ ಅಡಿಗಳಷ್ಟು ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ. ನೀರಿನ ಒತ್ತಡದ ಪರಿಣಾಮ ಮನೆಯ ಹಿಂದಿನ ಬಾಗದ ಆವರಣ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ.

Kinnigoli-22071502

Comments

comments

Comments are closed.

Read previous post:
Kinnigoli-22071501
ದಾಮಸ್‌ಕಟ್ಟೆ : ನಾಡಿಗೆ ಬಂದ ನರಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆಯ ತುಡಾಮ ಬಳಿ ಮಂಗಳವಾರ ನಾಯಿ ಗೂಡಲ್ಲಿ ನರಿಯೊಂದು ಪ್ರತ್ಯಕ್ಷವಾಗಿದೆ. ತುಡಾಮ ಬಳಿಯ ಪತ್ರಾವೋ ಕಾಟೇಜ್ ಮನೆಯ ನಾಯಿಗಳು ಇಂದು ಮಧ್ಯಾಹ್ನ ನರಿಯೊಂದನ್ನು...

Close