ದಾಮಸ್‌ಕಟ್ಟೆ : ನಾಡಿಗೆ ಬಂದ ನರಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆಯ ತುಡಾಮ ಬಳಿ ಮಂಗಳವಾರ ನಾಯಿ ಗೂಡಲ್ಲಿ ನರಿಯೊಂದು ಪ್ರತ್ಯಕ್ಷವಾಗಿದೆ.
ತುಡಾಮ ಬಳಿಯ ಪತ್ರಾವೋ ಕಾಟೇಜ್ ಮನೆಯ ನಾಯಿಗಳು ಇಂದು ಮಧ್ಯಾಹ್ನ ನರಿಯೊಂದನ್ನು ಓಡಿಸಿಕೊಂಡು ಬಂದಿತ್ತು. ಇವುಗಳನ್ನು ಕಂಡು ಬೆದರಿದ ನರಿಯು ಕುಂಟುತ್ತಾ ನೇರವಾಗಿ ನಾಯಿಯ ಗೂಡು ಹೊಕ್ಕು ತನ್ನ ರಕ್ಷಣೆಯನ್ನು ತಾನೇ ಮಾಡಿದೆ. ಕೂಡಲೇ ಇದನ್ನು ನೋಡಿದ ಮನೆಯವರು ನಾಯಿ ಗೂಡಿನ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ, ಇಲಾಖಾಧಿಕಾರಿಗಳು ಬಂದು ನರಿಗೆ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ. ಕಾಡುಗಳನ್ನು ಸಮತಟ್ಟು ಮಾಡಿ ಸೈಟ್‌ಗಳನ್ನಾಗಿ ಪರಿವರ್ತಿಸುತ್ತಿರುವುದರಿಂದ ಕಾಡು ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬರಲು ಆರಂಭಿಸಿದೆ. ಎನ್ನುತ್ತಾರೆ ಸ್ಥಳೀಯ ನಾಗರೀಕರು.

Kinnigoli-22071501

Comments

comments

Comments are closed.

Read previous post:
Kinnigoli-21071504
ಚಂದ್ರಶೇಖರ ಗೋಳಿಜೋರ ಆಯ್ಕೆ

ಕಿನ್ನಿಗೋಳಿ: ಗೋಳಿಜೋರಾ ಶ್ರೀ ರಾಮ ಯುವಕ ವೃಂದದ ವಾರ್ಷಿಕ ಮಹಾಸಭೆಯಲ್ಲಿ 2015-16ನೇ ಸಾಲಿನ ಅಧ್ಯಕ್ಷರಾಗಿ ಚಂದ್ರಶೇಖರ ಗೋಳಿಜೋರ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಪ್ರಕಾಶ್ ಹೆಗ್ಡೆ ಎಳತ್ತೂರು, ಉಪಾಧ್ಯಕ್ಷ ಮನೋಜ್‌ಕುಮಾರ್, ಕಾರ್ಯದರ್ಶಿ...

Close