ಕಡಲ ಬದಿಯಲ್ಲೊಂದು ಕಾಲ್ನಡಿಗೆ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಐಕಳದ ಎನ್ ಸಿ ಸಿ ನೌಕಾದಳದ ವಿದ್ಯಾರ್ಥಿಗಳಿಂದ ಕಡಲಬದಿಯಲ್ಲೊಂದು ಕಾಲ್ನಡಿಗೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ವಿದ್ಯಾರ್ಥಿಗಳಲ್ಲಿ ಆರೋಗ್ಯ ಕಾಳಜಿ, ಪರಿಸರ ಪ್ರೇಮ, ಸಾಹಸ ಮನೋಭಾವ, ನಾಯಕತ್ವ, ಏಕತೆ ಮತ್ತು ಶಿಸ್ತು ಮುಂತಾದ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಕಡಲಬದಿಯ ಜನರು ವಿಶೇಷವಾಗಿ ಮಳೆಗಾಲದಲ್ಲಿ ಪ್ರಚಂಡ ಗಾಳಿ, ಬಿರುಸಾದ ಮಳೆ, ಬೃಹತ್ ತೆರೆಗಳು ಹಾಗೂ ಭಯಹುಟ್ಟಿಸುವ ಕಡಲಿನ ಭೋರ್ಗರೆತಗಳೊದಿಗೆ ಬದುಕು ಸಾಗಿಸುವ ನೈಜ ಚಿತ್ರಣವನ್ನು ಕಣ್ಣಾರೆ ನೋಡಿ ತಿಳಿದುಕೊಳ್ಳುವ ದೃಷ್ಟಿಯಿಂದ ಹಮ್ಮಿಕೊಂಡ ಈ ಕಾಲ್ನಡಿಗೆ ಉಡುಪಿ ತಾಲೂಕಿನ ಕಟಪಾಡಿಯ ಮಟ್ಟು ಸಮುದ್ರ ತೀರದಿಂದ ಪ್ರಾರಂಭಿಸಲಾಯಿತು. ಸಮುದ್ರ ಕೊರೆತ, ಮೀನುಗಾರಿಕೆಗೆ ತಯಾರಿ ಮುಂತಾದ ತೀರಪ್ರದೇಶದ ವಿಶೇಷತೆಗಳನ್ನು ವೀಕ್ಷಿಸುತ್ತಾ ಮಲ್ಪೆ ಮೀನುಗಾರಿಕಾ ಬಂದರಿನ ತನಕ ಸಾಗಿದ ಸುಮಾರು 15ಕಿಲೋ ಮೀಟರ್‌ದೂರದ ಈ ನಡಿಗೆಯಲ್ಲಿ 18 ವಿದ್ಯಾರ್ಥಿನಿಯರು ಹಾಗೂ 26 ಹುಡುಗರು ಪಾಲ್ಗೊಂಡಿದ್ದರು. ಕಾಲೇಜು ಪ್ರಾಂಶುಪಾಲರಾದ ಡಾ. ಜೋನ್ ಕ್ಲಾರೆನ್ಸ್ ಮಿರಾಂಡ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಈ ಮಳೆಗಾಲದ ವಿಶೇಷ ಕಾಲ್ನಡಿಗೆ ಮಾನ್ಸೂನ್ ವಾಕ್ ಎನ್ ಸಿ ಸಿ ಅಧಿಕಾರಿ ಲೆಪ್ಟಿನೆಂಟ್ ಪುರುಷೋತ್ತಮ ಕೆ.ವಿ. ಸಂಯೋಜಿಸಿದ್ದರು. ಎನ್ ಸಿ ಸಿ ಕೆಡೆಟ್ ಕ್ಯಾಪ್ಟನ್ ಅಂಕಿತ್ ಕೋಟ್ಯಾನ್, ಪಿ.ಒ ಕೆಡೆಟ್‌ಗಳಾದ ನಿತೇಶ್ ಮತ್ತು ಪಲ್ಲವಿ, ಮುಂದಾಳತ್ವ ವಹಿಸಿದ್ದರು.

Kinnigoli-22071506 Kinnigoli-22071507

Comments

comments

Comments are closed.

Read previous post:
Kinnigoli-22071504
ಕುಸಿಯುವ ಭೀತಿಯಲ್ಲಿ ಕಾಲು ಸಂಕ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಲಕ್ಷ್ಮೀ ಜನಾರ್ಧನ ದೇವಳದ ಸಮೀಪದಲ್ಲಿ ಐದು ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ ಸುಮಾರು ಒಂದೂವರೆ ಲಕ್ಷ ಅನುದಾನದಿಂದ ನಿರ್ಮಿಸಿದ...

Close