ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಆಸಕ್ತಿ

ಕಿನ್ನಿಗೋಳಿ: ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿಳಿದು ನೇಜಿ ನೆಡುವ, ಕೃಷಿಯ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸತೀಶ್ ಹೇಳಿದರು.
ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನ ಎರಡೂ ಎನ್‌ಎಸ್‌ಎಸ್ ಘಟಕಗಳು ಹಾಗೂ ಸ್ಥಳೀಯ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಜಂಟಿಯಾಗಿ ಬಳ್ಕುಂಜೆ ಬ್ರಹ್ಮರ ಬಾಕಿಯಾರಿನ ಕರುಣಾಕರ ಶೆಟ್ಟಿ ಅವರ ಸುಮಾರು ೩ ಎಕರೆ ಗದ್ದೆಯಲ್ಲಿ ಭತ್ತದ ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ಡಾ.ಕೃಷ್ಣ ಕಾಂಚನ್ ಅವರು ಮಾತನಾಡುತ್ತಾ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗಿದು ನಿಜಕ್ಕೂ ಹೊಸ ಅನುಭವ ಎಂದರು.
ಜಗದೀಶ್ಚಂದ್ರ ಕೆ.ಕೆ. ಅವರು ಕೃಷಿ ಹಾಗೂ ರೈತನ ಜೀವನಕ್ಕೂ ಭಾರತದ ಪ್ರತೀ ಓರ್ವನಿಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧವನ್ನು ಮುಂದೆಯೂ ಉಳಿಸಿಕೊಳ್ಳುವ ಅಗತ್ಯವಿದೆ ಎಚಿದರು.
ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಭವ್ಯಾ, ಎನ್‌ಎಸ್‌ಎಸ್ ಘಟಕದ ಕಾರ್ಯದರ್ಶಿಗಳು, ವಿದ್ಯಾರ್ಥಿಗಳು ಹಾಗೂ ಆಸಕ್ತ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Kinnigoli-24071502

Comments

comments

Comments are closed.

Read previous post:
Mulki-24071501
ರುಕ್ಮಿಣಿಯಮ್ಮ ಪರಂಕಿಲ

ಮೂಲ್ಕಿ: ಶಿಮಂತೂರು ಪರಂಕಿಲ ನಿವಾಸಿ ರುಕ್ಮಿಣಿಯಮ್ಮ(66) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ವೇದಮೂರ್ತಿ ಪರಂಕಿಲ ದಿ.ಕೃಷ್ಣ ಭಟ್ಟರ ಧರ್ಮ ಪತ್ನಿಯಾಗಿದ್ದುಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಅವರು...

Close