ಏಳಿಂಜೆ ಕುಸಿದ ಕಾಲು ಸಂಕ

 ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಲಕ್ಷ್ಮೀ ಜನಾರ್ಧನ ದೇವಳದ ಸಮೀಪ ಐದು ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ ಒಂದೂವರೆ ಲಕ್ಷ ಅನುದಾನದಿಂದ ನಿರ್ಮಿಸಿದ ಕಾಲು ಸಂಕ ಹೋದ ವರ್ಷದಿಂದ ಶಿಥಿಲಾವಸ್ಥೆಯತ್ತ ಸಾಗುತ್ತಿದ್ದ ಈ ಸಲದ ಮಳೆಗಾಲದಲ್ಲಿ ಕಾಲು ಸಂಕದ ಅಡಿಯಲ್ಲಿ ಹೊಂಡವೊಂದು ನಿರ್ಮಾಣವಾಗಿ ಕಟ್ಟದ್ದ ಕಲ್ಲುಗಳು ಸಡಿಲಗೊಂಡು ಕುಸಿಯುವ ಭೀತಿಯಲ್ಲಿದ್ದು ಶುಕ್ರವಾರ ಜನರಿಗೆ ನಡೆದಾಡಲು ಕಷ್ಟವಾಗುವಂತೆ ಕುಸಿದು ಬಿದ್ದಿದೆ. ಏಳಿಂಜೆ ಪಟ್ಟೆ ಗ್ರಾಮಗಳ ಗದ್ದೆಗಳ ಮಧ್ಯೆ ಹೊಳೆಗೆ ನಿರ್ಮಿಸಿರುವ ಕಾಲು ಸಂಕ ಈಗ ಜನರು ಸರ್ಕಸ್ ಮಾಡಿ ನಡೆದಾಡುವ ಪ್ರಸಂಗ ನಡೆದಿದೆ ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದರೂ ಸಂಬಂಧಪಟ್ಟವರು ಅವ್ಶೆಜ್ಞಾನಿಕ ಕಾಲು ಸಂಕದ ಕಾಮಗಾರಿ ಬಗ್ಗೆ ಅಸಡ್ಡೆ ವಹಿಸಿರುವುದು ವಿಷಾದನೀಯ.

ಮಳೆಗಾಲದಲ್ಲಿ ಪರದಾಟ
ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಹೊಳೆಯಿಂದಾಗಿ ಜನರು ಹಾಗೂ ಪಟ್ಟೆ ಗ್ರಾಮದ ಶಾಲಾ ಮಕ್ಕಳು ಸಂಕ ದಾಟಲು ಪರದಾಡುವ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಅವಘಡ ಆಗುವ ಮೊದಲು ಈ ಸಂಕದ ಕಡೆ ಜಿಲ್ಲಾಡಳಿತ ಗಮನವಿಟ್ಟರೆ ಒಳಿತು.

Kinnigoli-24071509 Kinnigoli-24071510

Comments

comments

Comments are closed.

Read previous post:
Kinnigoli-24071507
ಕಿನ್ನಿಗೋಳಿ ವನಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆಯಿತ್ತರು. ಶಾಲಾ ಮುಖ್ಯಶಿಕ್ಷಕಿ...

Close