ಸಂಸ್ಕೃತಿ ಪರಂಪರೆಗಳನ್ನು ಮರೆಯಬಾರದು

ಕಿನ್ನಿಗೋಳಿ: ಕನ್ನಡ ಸಂಸ್ಕೃತಿ ಪರಂಪರೆಗಳನ್ನು ಮರೆಯಬಾರದು. ಸಾಂಸ್ಕ್ರತಿಕ ಹಾಗೂ ಸಾಹಿತ್ಯಕವಾಗಿ ಕನ್ನಡವನ್ನು ಪಸರಿಸಬೇಕು ಎಂದು ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಕಾಂತಾವರ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶುಕ್ರವಾರ ನಡೆದ ಯುಗಪುರುಷದ ಸಂಸ್ಥಾಪಕ ದಿ.ಕೊ.ಅ.ಉಡುಪ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಎಂ.ಆರ್.ಪಿ.ಎಲ್. ಜನರಲ್ ಮ್ಯಾನೇಜರ್ ಲಕ್ಷ್ಮೀಕುಮಾರನ್ ಅಧ್ಯಕ್ಷತೆ ವಹಿಸಿ ಸಾಹಿತ್ಯವನ್ನು ಪ್ರೋತ್ಸಾಹಿಸುವ ಮನೋಭಾವನೆ ಮೂಡಿದಾಗ ಸಾಹಿತ್ಯ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ ಎಂದರು.
ವೇದ ವಿದ್ವಾಂಸರ ನೆಲೆಯಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಉಚ್ಚಿಲ ವೆಂಕಟ ನರಸಿಂಹ ಉಪಾಧ್ಯಾಯರನ್ನು ಕಟೀಲು ದೇವಳದ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಗೌರವಿಸಿದರು.
ಪರಿಸರದ ಪ್ರಾಥಮಿಕ ಶಾಲೆಗಳ ಅಂದದ ಬರವಣಿಗೆಯ ಪ್ರತಿಭೆಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯವನ್ನು ವಿತರಿಸಲಾಯಿತು.
ಯುಗಪುರುಷ ಪ್ರಕಟಣಾಲಯದ ಪ್ರಕಟಿತ ಬೆಂಗಳೂರು ಎಂ.ವಿ. ಭಟ್ ರಚಿತ ಇದೆಲ್ಲಾ ಈ ದೇಶದಲ್ಲಿ ಮಾಮೂಲಿ, ಪಳಕಳ ಸೀತಾರಾಮ ಭಟ್ ರಚಿತ “ಪುಟ್ಟಿಯ ಪದಗಳು” ಮತ್ತು ಮಾವಮ್ಮನ ಮಗು ಕೃತಿಗಳನ್ನು ಹಿರಿಯ ಸಾಹಿತಿ ಕೆ.ಜಿ.ಮಲ್ಯರವರು ಅನಾವರಣಗೊಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ದಿ.ಕೊ.ಅ.ಉಡುಪರ ಸಂಸ್ಮರಣೆ ಹಾಗೂ ಶುಭಾಶಂಸನೆಗೈದರು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರಕಟೀಲು, ಯೋಗಶಿಕ್ಷಕ ಕೆಂಚನಕೆರೆ ಜಯಶೆಟ್ಟಿ, ಜಯರಾಮ ಉಡುಪ, ಯು.ಪಿ. ಉಪಧ್ಯಾಯ, ಸಂದೇಶ್ ಶೆಟ್ಟಿ, ಪದ್ಮನಾಭ ಉಡುಪ ಉಪಸ್ಥಿತರಿದ್ದರು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಪರ್ತಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಸಮಗ್ರ ವಿಶ್ವಾಮಿತ್ರ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Kinnigoli-25071501 Kinnigoli-25071502Kinnigoli-25071504Kinnigoli-25071503

Comments

comments

Comments are closed.

Read previous post:
Kinnigoli-24071510
ಏಳಿಂಜೆ ಕುಸಿದ ಕಾಲು ಸಂಕ

 ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಲಕ್ಷ್ಮೀ ಜನಾರ್ಧನ ದೇವಳದ ಸಮೀಪ ಐದು ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ ಒಂದೂವರೆ ಲಕ್ಷ ಅನುದಾನದಿಂದ ನಿರ್ಮಿಸಿದ ಕಾಲು...

Close