ವಿದ್ಯಾರ್ಥಿ ವೇತನ ಅರ್ಜಿ ವಿತರಣಾ ಸಮಾರಂಭ

ಮೂಲ್ಕಿ: ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಮುಖ್ಯವಾಗಿದ್ದು ತಮ್ಮಲಿರುವ ಪ್ರತಿಭೆಗಳನ್ನು ವಿಕಸಗೊಳಿಸಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಅಭಿವೃದ್ದಿಯಲ್ಲಿ ಯುವ ಸಮುದಾಯ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರಗಿದ ಮೂಲ್ಕಿ ಸಂಘ ವ್ಯಾಪ್ತಿಯಲ್ಲಿನ ಪಿಯುಸಿಯಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಗುರು ಜಯಂತಿಯಂದು ನೀಡುವ ವಿದ್ಯಾರ್ಥಿ ವೇತನದ ಅರ್ಜಿ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷರುಗಳಾರ ರಾಘು ಸುವರ್ಣ, ಯಧೀಶ್ ಅಮೀನ್ ಕೊಕ್ಕರ್ ಕಲ್, ಕೋಶಾಧಿಕಾರಿ ಪ್ರಕಾಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಗೋಪಿನಾಥ ಪಡಂಗ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ರಮೇಶ್ ಕೊಕ್ಕರ್ ಕಲ್ ವಂದಿಸಿದರು.

Prakash Suvarna

Mulki-27071507

Comments

comments

Comments are closed.

Read previous post:
Mulki-27071505
ಸಾವಯವ ಕೃಷಿಗೆ ಪ್ರಾಧ್ಯತೆ ನೀಡಲು ಸಲಹೆ

ಮೂಲ್ಕಿ: ಇಂದಿನ ಆಧುನಿಕ ಯುಗದಲ್ಲಿ ಕೃಷಿಗೆ ನೀಡುವ ಪ್ರಾಧ್ಯತೆ ಕಡಿಮೆಯಾಗಿದ್ದು ಸಹಕಾರ ಸಂಘ ನೀಡುವ ಉತ್ತೇಜನವನ್ನು ಸದುಪಯೋಗಪಡಿಸಿಕೊಂಡು ರಾಸಾಯನಿಕ ಗೊಬ್ಬರಗಳನ್ನು ದೂರಮಾಡಿ ಸಾವಯವ ಕೃಷಿಗೆ ಪ್ರಾಧಾನ್ಯತೆ ನೀಡಬೇಕೆಂದು...

Close