ಕೊಲ್ಲೂರು – ವೈದ್ಯಕೀಯ ತಪಾಸಣೆ

ಕಿನ್ನಿಗೋಳಿ: ಸಮಾಜದ ಎಲ್ಲಾ ವರ್ಗದ ಜನರಿಗೆ ಉತ್ತಮ ಗುಣಮಟ್ಟದ ವೈದಕೀಯ ಸವಲತ್ತು ನೀಡುವುದು ಸಂಸ್ಥೆಯ ಉದ್ದೇಶ ಎಂದು ಶ್ರೀನಿವಾಸ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅಣ್ಣಯ್ಯ ಕುಲಾಲ್ ಹೇಳಿದರು.
ಶ್ರೀನಿವಾಸ ಆಸ್ಪತ್ರೆ ಮುಕ್ಕ ಹಾಗೂ ಕೊಲ್ಲೂರು ಹಳೆ ವಿದ್ಯಾರ್ಥೀ ಸಂಘದ ಜಂಟಿ ಆಶ್ರಯದಲ್ಲಿ ಭಾನುವಾರ ಕೊಲ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀನಿವಾಸ ಆಸ್ಪತ್ರೆಯ ಮಾರ್ಕೇಟಿಂಗ್ ವಿಭಾಗ ಮುಖ್ಯಸ್ಥ ಪ್ರೊ. ಶ್ರೀರಾಮ ಕಾರಂತ, ಕೊಲ್ಲೂರು ಸರಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಶೋಭಾರಾಣಿ ಎನ್.ಎಸ್., ನೋಟರಿ ವಕೀಲ ಬಿಪಿನ್ ಪ್ರಸಾದ್, ಐತಪ್ಪ ಸಾಲ್ಯಾನ್, ಬಳ್ಕುಂಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ, ಗೀತಾನಾಯ್ಕ ಉಪಸ್ಥಿತರಿದ್ದರು.
ಕೊಲ್ಲೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೈಕಲ್ ರೊಡ್ರಿಗಸ್ ಸ್ವಾಗತಿಸಿ ಉಮೇಶ್ ವಂದಿಸಿದರು. ಎಲ್ಲಪ್ಪ ಟಿ. ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Mulki-27071512

Comments

comments

Comments are closed.

Read previous post:
Mulki-27071510
ಕಿನ್ನಿಗೋಳಿ ಆಟಿ ಆಚರಣೆ

ಕಿನ್ನಿಗೋಳಿ: ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವ ಇಂದಿನ ಯುಗದಲ್ಲಿ ಸಮಾಜದ ಉತ್ತಮ ಕಟ್ಟು ಕಟ್ಟಳೆಗಳನ್ನು ತಮ್ಮ ಜೀವನದಲ್ಲಿ ರೂಡಿಸಿ ಯುವ ಜನಾಂಗಕ್ಕೂ ಇದರ ಮಹತ್ವ ತಿಳಿಹೇಳಬೇಕು ಎಂದು ಮಿಲಾಗ್ರೀಸ್ ಕಾಲೇಜು...

Close