ಕಿನ್ನಿಗೋಳಿ ಆಟಿ ಆಚರಣೆ

ಕಿನ್ನಿಗೋಳಿ: ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವ ಇಂದಿನ ಯುಗದಲ್ಲಿ ಸಮಾಜದ ಉತ್ತಮ ಕಟ್ಟು ಕಟ್ಟಳೆಗಳನ್ನು ತಮ್ಮ ಜೀವನದಲ್ಲಿ ರೂಡಿಸಿ ಯುವ ಜನಾಂಗಕ್ಕೂ ಇದರ ಮಹತ್ವ ತಿಳಿಹೇಳಬೇಕು ಎಂದು ಮಿಲಾಗ್ರೀಸ್ ಕಾಲೇಜು ಕನ್ನಡ ಉಪನ್ಯಾಸಕಿ ಮಲ್ಲಿಕಾ ಅಜಿತ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಸರಾಫ್ ಅಣ್ಣಯ್ಯಾ ಆಚಾರ್ಯ ಸಭಾಭವನದಲ್ಲಿ ಶನಿವಾರ ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ ಆಯೋಜಿಸಿದ “ಆಟಿ ಆಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಪರಿಸರದ ಗ್ರಾಮ ಪಂಚಾಯಿತಿ ಸದಸ್ಯೆರಾಗಿ ಆಯ್ಕೆಯಾದ ಸರೋಜಿನಿ, ಮಲ್ಲಿಕಾ ಆಚಾರ್ಯ, ಮಾಲತಿ ಜಗದೀಶ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ ಅಧ್ಯಕ್ಷೆ ಹೇಮಾ ವಿಶ್ವನಾಥ ಆಚಾರ್ಯ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ದಿನೇಶ್ ಆಚಾರ್ಯ, ಸರಾಫ್ ಅಣ್ಣಯ್ಯಾ ಆಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ, ಬಹರೈನ್ ವಿಶ್ವಕರ್ಮ ಸಂಘದ ಅಧ್ಯಕ್ಷ ಕೆ.ಬಿ. ಜಗದೀಶ ಆಚಾರ್ಯ ಉಪಸ್ಥಿತರಿದ್ದರು.
ಶಶಿಕಲಾ ಆಚಾರ್ಯ ಸ್ವಾಗತಿಸಿ, ಸವಿತಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

Mulki-27071508 Mulki-27071509 Mulki-27071510 Mulki-27071511

Comments

comments

Comments are closed.

Read previous post:
Mulki-27071507
ವಿದ್ಯಾರ್ಥಿ ವೇತನ ಅರ್ಜಿ ವಿತರಣಾ ಸಮಾರಂಭ

ಮೂಲ್ಕಿ: ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಮುಖ್ಯವಾಗಿದ್ದು ತಮ್ಮಲಿರುವ ಪ್ರತಿಭೆಗಳನ್ನು ವಿಕಸಗೊಳಿಸಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಅಭಿವೃದ್ದಿಯಲ್ಲಿ ಯುವ ಸಮುದಾಯ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮೂಲ್ಕಿಯ...

Close