ನರೇಗಾ ಯೋಜನೆಯಲ್ಲಿ ದಿನಗೂಲಿ ಅತ್ಯಲ್ಪ

ಮೂಲ್ಕಿ: ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಬೇಕಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನೀಡುವ ದಿನಗೂಲಿ ಅತ್ಯಲ್ಪ. ಇದರಿಂದ ಕರಾವಳಿ ಭಾಗದಲ್ಲಿ ಇದಕ್ಕೆ ಸಾಕಷ್ಟು ಜನರ ನಿರಾಸಕ್ತಿ ಇದೆ ಇದರಿಂದ ಗ್ರಾಮ ಪಂಚಾಯಿತಿಯಲ್ಲಿ ಯೋಜನೆಗೆ ಪೂರಕ ಸಹಕಾರ ಸಿಗುತ್ತಿಲ್ಲ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನದಾಸ ಅಭಿಪ್ರಾಯ ಪಟ್ಟರು.
ಪಡುಪಣಂಬೂರು ಗ್ರಾಮ ಪಂಚಾಯಿತಿನಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಲೆಕ್ಕಪರಿಶೋಧನಾ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪಂಚಾಯಿತಿರಾಜ್ ಇಲಾಖೆಯ ಜಿಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸುಜನ್ ಚಂದ್ರರಾವ್ ನೋಡೆಲ್ ಅಧಿಕಾರಿಯಾಗಿ ಮಾರ್ಗದರ್ಶನ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿತಾ ವಿ. ಕ್ಯಾಥರಿನ್ ವರದಿಯನ್ನು ಮಂಡಿಸಿ ೧೦೮ ಸದಸ್ಯರ ನೋಂದಣಿ ಮತ್ತು ೬೩.೫ ಲಕ್ಷ ರೂ. ವಿನ ಕ್ರಿಯಾ ಯೋಜನೆಗೆ ಪ್ರಸ್ತುತ ವರ್ಷದಲ್ಲಿ ಅನುಮೋದನೆ ಪಡೆದುಕೊಂಡರು. ಯೋಜನೆಯ ಉಸ್ತುವಾರಿ ಕಿಶೋರ್ ಪೈ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಪಂಚಾಯಿತಿ ಉಪಾಧ್ಯಕ್ಷೆ ಸುರೇಖಾ ಕೆರೆಕಾಡು, ಇಂಜಿನಿಯರ್ ಪ್ರಶಾಂತ್ ಆಳ್ವಾ, ತಾಲ್ಲೂಕು ಸಂಯೋಜಕ ಹರೀಶ್, ನರೇಗಾ ಯೋಜನೆಯ ನಿರ್ವಾಹಕರಾದ ಪದ್ಮಾವತಿ, ರುದೇಶ್, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

Narendram Kerekadu

Mulki-27071501

Comments

comments

Comments are closed.

Read previous post:
Kinnigoli-25071502
ಸಂಸ್ಕೃತಿ ಪರಂಪರೆಗಳನ್ನು ಮರೆಯಬಾರದು

ಕಿನ್ನಿಗೋಳಿ: ಕನ್ನಡ ಸಂಸ್ಕೃತಿ ಪರಂಪರೆಗಳನ್ನು ಮರೆಯಬಾರದು. ಸಾಂಸ್ಕ್ರತಿಕ ಹಾಗೂ ಸಾಹಿತ್ಯಕವಾಗಿ ಕನ್ನಡವನ್ನು ಪಸರಿಸಬೇಕು ಎಂದು ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಕಾಂತಾವರ ಹೇಳಿದರು. ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶುಕ್ರವಾರ...

Close