ಸಾವಯವ ಕೃಷಿಗೆ ಪ್ರಾಧ್ಯತೆ ನೀಡಲು ಸಲಹೆ

ಮೂಲ್ಕಿ: ಇಂದಿನ ಆಧುನಿಕ ಯುಗದಲ್ಲಿ ಕೃಷಿಗೆ ನೀಡುವ ಪ್ರಾಧ್ಯತೆ ಕಡಿಮೆಯಾಗಿದ್ದು ಸಹಕಾರ ಸಂಘ ನೀಡುವ ಉತ್ತೇಜನವನ್ನು ಸದುಪಯೋಗಪಡಿಸಿಕೊಂಡು ರಾಸಾಯನಿಕ ಗೊಬ್ಬರಗಳನ್ನು ದೂರಮಾಡಿ ಸಾವಯವ ಕೃಷಿಗೆ ಪ್ರಾಧಾನ್ಯತೆ ನೀಡಬೇಕೆಂದು ಫಲ್ಗುಣಿ ಸಾವಯವ ಕೃಷಿಪರಿವಾರ(ರಿ) ಮಂಗಳೂರು ಇದರ ಸಂಚಾಲಕ ರಂಗನಾಥ ಭಟ್ ಹೇಳಿದರು.
ದ.ಕ ಹಾಲು ಉತ್ಪಾದಕ ಒಕ್ಕೂಟ(ನಿ) ಮಂಗಳೂರು ಮತ್ತು ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಂಘ(ನಿ) ಇದರ ಸಂಯುಕ್ತ ಆಶ್ರಯದಲ್ಲಿ ನಬಾರ್ಡ ಯೋಜನೆಯಡಿ ಸಾವಯವ ಕೃಷಿಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಅತಿಕಾರಿಬೆಟ್ಟು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಬರ್ಕೆತೋಟ ವಹಿಸಿದ್ದರು. ಮಂಗಳೂರು ಜೀವವಿಮಾ ನಿಗಮದ ಅಧಿಕಾರಿ ಶಂಕರ್ ವಿ.ಹೆಗ್ಡೆ, ಪಶು ವೈದ್ಯಾಧಿಕಾರಿ ಮಧುಸೂಧನ್ ಭಟ್, ಮೂಲ್ಕಿ ಹೋಬಳಿ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ಯಲ್ಲನ ಗೌಡ ಹಾಗೂ ಅತಿಕಾರಿಬೆಟ್ಟು ಹಾಲು ಉತ್ಪಾದಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಸಂಘದ ವತಿಯಿಂದ ಹಾಲು ಉತ್ಪಾದಕರಿಗೆ ಶೇಕಡಾ 25 ಬೋನಸ್ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಜನಶ್ರೀ ಯೋಜನೆಯಡಿ 39 ಸಾವಿರ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಅತಿಕಾರಿಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ‍್ಯದರ್ಶಿ ಕಿಶೋರ್ ಸ್ವಾಗತಿಸಿದರು, ಸದಸ್ಯರಾದ ರತ್ನಾಕರ ಶೆಟ್ಟಿ ಧನ್ಯವಾದ ಅರ್ಪಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ. ವಿ ಕಾರ‍್ಯಕ್ರಮ ನಿರೂಪಿಸಿದರು.

Puneethakrishna

Mulki-27071505 Mulki-27071506

Comments

comments

Comments are closed.

Read previous post:
Kinnigoli-27071504
ಭಕ್ತಿ, ಸೇವೆಗೆ ಹನೂಮಂತ ಆದರ್ಶ

ಕಟೀಲು : ರಾಮ ದೇವರ ಕುರಿತಾದ ಅನನ್ಯ ಭಕ್ತಿ ಹಾಗೂ ಸೇವೆಗೆ ಹನೂಮಂತ ಎಲ್ಲರಿಗೂ ಆದರ್ಶವ್ಯಕ್ತಿಯಾಗಿ ಪೂಜ್ಯನೀಯ ಎಂದು ಯಕ್ಷಗಾನ ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆ ಹೇಳಿದರು....

Close