ಕೆಂಚನಕೆರೆ ಕೋಳಿ ಸಾಗಾಟದ ಜೀಪು ಪಲ್ಟಿ

ಕಿನ್ನಿಗೋಳಿ: ಮೂಲ್ಕಿ – ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಂಚನಕೆರೆ ಶಾಲೆಯ ಬಳಿ ಕೋಳಿ ಸಾಗಾಟದ ಜೀಪೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಘಟನೆ ಸೋಮವಾರ ನಡೆದಿದೆ.
ಕೆಂಚನಕೆರೆಯ ಶಾಲೆ ಬಳಿ ವಾಹನವೊಂದಕ್ಕೆ ದಾರಿ ಬಿಡುವಾಗ ರಸ್ತೆಯ ಅಂಚಿನಲ್ಲಿ ವಾಹನದ ಟಯರ್ ಸಿಲುಕಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಇನ್ನೊಂದು ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ವಿದ್ಯುತ್ ಕಂಬ ಸಂಪೂರ್ಣ ತುಂಡಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Kinnigoli-28071503 Kinnigoli-28071504 Kinnigoli-28071505 Kinnigoli-28071506

Comments

comments

Comments are closed.

Read previous post:
Kinnigoli-28071502
ಯಕ್ಷಗಾನ ಮನೋವಿಕಾಸ ಬೆಳಗಿಸುವ ಕಲೆ

ಕಿನ್ನಿಗೋಳಿ: ಯಕ್ಷಗಾನ ಮನೋವಿಕಾಸ ಬೆಳಗಿಸುವ ಕಲೆ. ಕಲಾವಿದನಿಗೆ ಆಸಕ್ತಿ ಹಾಗೂ ಅಧ್ಯಯನದ ಮನೋಭಾವ ಬೆಳೆದಾಗ ಭಾಷಾ ಪಾಂಡಿತ್ಯ ಅಭಿವೃದ್ಧಿಗೊಳ್ಳುತ್ತದೆ. ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು....

Close