ಯಕ್ಷಗಾನ ಮನೋವಿಕಾಸ ಬೆಳಗಿಸುವ ಕಲೆ

ಕಿನ್ನಿಗೋಳಿ: ಯಕ್ಷಗಾನ ಮನೋವಿಕಾಸ ಬೆಳಗಿಸುವ ಕಲೆ. ಕಲಾವಿದನಿಗೆ ಆಸಕ್ತಿ ಹಾಗೂ ಅಧ್ಯಯನದ ಮನೋಭಾವ ಬೆಳೆದಾಗ ಭಾಷಾ ಪಾಂಡಿತ್ಯ ಅಭಿವೃದ್ಧಿಗೊಳ್ಳುತ್ತದೆ. ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಕುಜಿಂಗಿರಿ ಶ್ರೀ ಪತಂಜಲಿ ಯೋಗ ಅಧ್ಯಯನ ಕೇಂದ್ರ, ಗಮ್ಮತ್ ಕಲಾವಿದೆರ್ ಇದರ ದಶಮಾನೋತ್ಸವ ಹಾಗೂ ಶ್ರೀ ರಕ್ತೇಶ್ವರಿ ಯಕ್ಷಗಾನ ಕಲಾ ಮಂಡಳಿ ಇದರ ಸಹಯೋಗದಲ್ಲಿ ಭಾನುವಾರ ನಡೆದ ಉಚಿತ ಯಕ್ಷಗಾನ ತರಬೇತಿ ಹಾಗೂ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಗಾನ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ರಘುನಾಥ ಕಾಮತ್ ಕೆಂಚನಕೆರೆ ಉಪಸ್ಥಿತರಿದ್ದರು. ಸಂಚಾಲಕ ಹರಿರಾಜ ಕುಜಿಂಗಿರಿ ಸ್ವಾಗತಿಸಿ ಹರಿಪ್ರಸಾದ್ ಅಂಗರಗುಡ್ಡೆ ವಂದಿಸಿದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹವ್ಯಾಸಿ ಕಲಾವಿದರಿಂದ ಕರ್ಣಾರ್ಜುನ ತಾಳಮದ್ದಳೆ ನಡೆಯಿತು.

Kinnigoli-28071502

Comments

comments

Comments are closed.

Read previous post:
Kinnigoli-28071501
ಕಿನ್ನಿಗೋಳಿ-ಮೂಲ್ಕಿ ಒಕ್ಕೂಟದ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ-ಮೂಲ್ಕಿ ಶಾಮಿಯಾನ ಸಂಯೋಜಕರ ಒಕ್ಕೂಟದ ಮಹಾಸಭೆ ಭಾನುವಾರ ಕೆಂಚನಕೆರೆ ಅಂಗರಗುಡ್ಡೆಯಲ್ಲಿ ನಡೆಯಿತು. ಈ ಸಂದರ್ಭ ಹಿರಿಯ ಶಾಮಿಯಾನ ಸಂಯೋಜಕರ ಒಕ್ಕೂಟದ ಹಿರಿಯರಾದ ಬಾಬು ಶೆಟ್ಟಿಗಾರ್ ಮತ್ತು ಕುಸುಮ...

Close