ಮೂಲ್ಕಿ: ವಿದ್ಯಾರ್ಥಿ ವೇತನ

ಮೂಲ್ಕಿ: ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಮುಖ್ಯವಾಗಿದ್ದು ತಮ್ಮಲಿರುವ ಪ್ರತಿಭೆಗಳನ್ನು ವಿಕಸನಗೊಳಿಸಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಅಭಿವೃದ್ದಿಯಲ್ಲಿ ಯುವ ಸಮುದಾಯ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ಹೇಳಿದರು.
ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರಗಿದ ಮೂಲ್ಕಿ ಸಂಘದ ವ್ಯಾಪ್ತಿಯಲ್ಲಿನ ಪಿಯುಸಿಯಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಗುರು ಜಯಂತಿಯಂದು ನೀಡುವ ವಿದ್ಯಾರ್ಥಿ ವೇತನದ ಅರ್ಜಿ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಸಂಘದ ಮಾಜಿ ಅಧ್ಯಕ್ಷರುಗಳಾರ ರಾಘು ಸುವರ್ಣ,ಯಧೀಶ್ ಅಮೀನ್ ಕೊಕ್ಕರ್ ಕಲ್,ಕೋಶಾಧಿಕಾರಿ ಪ್ರಕಾಶ್ ಸುವರ್ಣ ಮತ್ತಿತರರು ಉಪಸ್ತಿತರಿದ್ದರು. ಈ ಸಂದರ್ಭ ಮಾಜಿ ಸಚಿವ ವಸಂತ ವಿ.ಸಾಲ್ಯಾನ್ ರವರ ನಿಧನಕ್ಕೆ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರಾದ ಕೆ.ರಾಘು ಸುವರ್ಣ,ಉಪಾಧ್ಯಕ್ಷ ಗೋಪೀನಾಥ ಪಡಂಗ, ಗೌ.ಪ್ರ.ಕಾರ್ಯದರ್ಶಿ ರಮೇಶ್ ಕೊಕ್ಕರಕಲ್, ಕೋಶಾಧಿಕಾರಿ ಪ್ರಕಾಶ್ ಎಂ.ಸುವರ್ಣ, ಮೂರ್ತೆದಾರರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಯುವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಗೋಪಿನಾಥ ಪಡಂಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಮೇಶ್ ಕೊಕ್ಕರ್‌ಕಲ್ ವಂದಿಸಿದರು.

Bhagyavan Sanil

Mulki-29071502

Comments

comments

Comments are closed.

Read previous post:
Mulki-29071501
ಏಕಾಹ ಭಜನಾ ಕಾರ್ಯಕ್ರಮ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸಂಯೋಜನೆಯಲ್ಲಿ  ಏಕಾಹ ಭಜನಾ ಕಾರ್ಯಕ್ರಮ. Bhagyavan Sanil

Close