ಬಾಲಕಾರ್ಮಿಕ ವಿದ್ಯಾರ್ಥಿಗಳಿಂದ ಜಾಗೃತಿ

ಮೂಲ್ಕಿ: ಸಾಮಾಜಿಕ ಪಿಡುಗಾಗಿರುವ ಬಾಲಕಾರ್ಮಿಕರ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಚಿತ್ರಗಳನ್ನು ಸ್ವತಹ ಬಿಡಿಸಿ ಅದನ್ನು ಸರ್ಕಾರಿ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗೆ ನೀಡುವ ವಿಶಿಷ್ಠ ಕಾರ್ಯಕ್ರಮವನ್ನು ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತಪೋವನದ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಇಂಟರ‍್ಯಾಕ್ಟ್ ಕ್ಲಬ್‌ನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು.
ಶಾಲೆಯಲ್ಲಿ ಇತ್ತೀಚೆಗೆ ಬಾಲಕಾರ್ಮಿಕರ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಇಂಟರ‍್ಯಾಕ್ಟ್ ಕ್ಲಬ್‌ನ ಸದಸ್ಯರು ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಮೂಲಕ ಎಳೆಯ ಮನಸ್ಸಿನಲ್ಲಿದ್ದ ಭಾವನೆಗಳು ಗೆರೆಗಳ ರೂಪದಲ್ಲಿ ಮೂಡಿಬಂದಿತ್ತು ಇದರಲ್ಲಿ ಆಯ್ದ ಚಿತ್ರಗಳನ್ನು ಮೂಲ್ಕಿ ಪಟ್ಟಣ ಪಂಚಾಯಿತಿಗೆ ವಿದ್ಯಾರ್ಥಿಗಳು ಹಸ್ತಾಂತರಿಸಿದರು.
ವಿದ್ಯಾರ್ಥಿಗಳ ಆಸಕ್ತಿಯನ್ನು ಆಲಿಸಿದ ಮುಖ್ಯಾಧಿಕಾರಿ ವಾಣಿ ಆಳ್ವಾ ಪ್ರತಿಕ್ರಿಯಿಸಿ ಮೂಲ್ಕಿ ವ್ಯಾಪ್ತಿಯು ಬಾಲಕಾರ್ಮಿಕರ ಮುಕ್ತ ಪ್ರದೇಶವಾಗಿದ್ದು ಮುಂದಿನ ದಿನದಲ್ಲಿಯೂ ಇಂತಹ ಪದ್ಧತಿಯನ್ನು ನಿಷೇಧಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಬಗ್ಗೆ ವಿದ್ಯಾರ್ಥಿ ಸಮುದಾಯವು ಕೈಗೊಂಡ ಜಾಗೃತಿ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಕಾರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿಗೂ ಭೇಟಿ ನೀಡಿ ಭಿತ್ತಿ ಚಿತ್ರವನ್ನು ಪ್ರಾಂಶುಪಾಲ ಪ್ರೋ.ವಿಷ್ಣುಮೂರ್ತಿಯವರಿಗೆ ಹಸ್ತಾಂತರಿಸಿದರು. ತಮ್ಮ ಶಾಲೆಯಲ್ಲೂ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಲತಾ ರಾವ್‌ರವರ ಮಾರ್ಗದರ್ಶನದಲ್ಲಿ ಇಂಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಶೃತಿ ಶ್ರೀಕರ್, ಕಾರ್ಯದರ್ಶಿ ವೈಷ್ಣವಿ ಕೆ. ಇಂಟರ‍್ಯಾಕ್ಟ್ ಸಂಚಾಲಕಿ ಸಹ ಶಿಕ್ಷಕಿ ಉಷಾ ನರೇಂದ್ರ ಕೆರೆಕಾಡು ಹಾಗೂ ವಿದ್ಯಾರ್ಥಿ ಸದಸ್ಯರು ಉಪಸ್ಥಿತರಿದ್ದರು.

Narendra Kerekadu

Kinnigoli-01081501 Kinnigoli-01081502

Comments

comments

Comments are closed.

Read previous post:
Mulki-29071503
ವನಮಹೋತ್ಸವ ಕಾರ್ಯಕ್ರಮ

ಮೂಲ್ಕಿ: ಸಾರ್ವಜನಿಕರಿಗೆ ಪೃಕ್ರತಿಯ ವೀಶೇಷತೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹೋಂಗಾಡ್ಸ್ ಸಂಸ್ಥೆಯ ಪ್ರತಿ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೋಂಗಾಡ್ಸ್ ಮಂಗಳೂರು ಜಿಲ್ಲಾ...

Close