ಭ್ರಾಮರೀ ಮಹಿಳಾ ಸಮಾಜ ಆಟಿಡೊಂಜಿ ದಿನ

ಕಿನ್ನಿಗೋಳಿ: ಹಿಂದಿನ ಕಾಲದ ಕಟ್ಟುಕಟ್ಟಳೆಗಳನ್ನು ರೂಢಿಸಿಕೊಂಡು ಸಮಾಜದ ಅಭಿವೃದ್ದಿಗೆ ಶ್ರಮಿಸಲು ಪಣತೊಡಬೇಕೆಂದು ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಹೇಳಿದರು.
ಕಿನ್ನಿಗೋಳಿ ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ವತಿಯಿಂದ ಕಿನ್ನಿಗೋಳಿಯ ಯುಗಪುರುಷ ಸಭಾಭವನಲ್ಲಿ ನಡೆದ ಆಟಿಡೊಂಜಿ ದಿನ ಹಾಗೂ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಎಸ್ ಅಧ್ಯಕ್ಷತೆ ವಹಿಸಿದ್ದರು. ಸುನಂದ ಕರ್ಕೇರ ಆಟಿ ಆಚರಣೆ ಬಗ್ಗೆ ಮಾಹಿತಿ ನೀಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಮೀಕ್ಷಾ, ಗೌತಮ್, ಸುಷ್ಮಾ ಅವರನ್ನು ಸನ್ಮಾನಿಸಲಾಯಿತು. ಲಿಖಿತಾ ಕೊಡೆತ್ತೂರು ಅವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಮೆನ್ನಬೆಟ್ಟು ಗ್ರಾಮಪಂಚಾಯತಿ ಅಧ್ಯಕ್ಷೆಯಾಗಿ ನೂತನವಾಗಿ ಆಯ್ಕೆಯಾದ ಸರೋಜಿನಿ ಎಸ್. ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಕಟೀಲು ಜಿ.ಪಂ. ಸದಸ್ಯ ಈಶ್ವರ ಕಟೀಲು, ಮಾಜೀ ಸೈನಿಕ ಹಾಗೂ ಮುಳುಗುತಜ್ಞ ಕಮಲಾಕ್ಷ ಬಂಗೇರ, ಮೂಡಬಿದ್ರೆ ಉದ್ಯಮಿ ಪ್ರಕಾಶ್ ಜೈನ್, ಮೆನ್ನಬೆಟ್ಟು ಗ್ರಾ.ಪಂ. ಸದಸ್ಯೆರಾದ ಬೇಬಿ, ಲಕ್ಷ್ಮಿ, ಮೀನಾಕ್ಷಿ ಡಿ.ಕುಂದರ್ ಉಪಸ್ಥಿತರಿದ್ದರು.
ಭ್ರಾಮರಿ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್ ಸ್ವಾಗತಿಸಿ ಸಂಧ್ಯಾ, ಶೋಭಪ್ರಿಯಾ, ಭಾನುಮತಿ ಸನ್ಮಾನ ಪತ್ರ ವಾಚಿಸಿದರು. ಮೀರಾ, ವಿನಯ, ದೀಪಾ ಒಗಟು ಕಾರ್ಯಕ್ರಮ ನಡೆಸಿಕೊಟ್ಟರು. ಸುಜಯ ಧನ್ಯವಾದ ಅರ್ಪಿಸಿದರು. ಕಾರ್ಯದರ್ಶಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Kinnigoli-03081503

Comments

comments

Comments are closed.

Read previous post:
Kinnigoli-03081502
ದೇಶದ ಉನ್ನತಿ ನೇತಾರನ ಕೈಯಲ್ಲಿದೆ

ಕಿನ್ನಿಗೋಳಿ: ನಾಯಕತ್ವ ಗುಣವನ್ನು ವಿದ್ಯಾರ್ಥಿ ದೆಸೆಯಲ್ಲೇ ಮೈಗೂಡಿಸಿಕೊಳ್ಳಬೇಕು. ದೇಶದ ಉನ್ನತಿ ಮತ್ತು ಅವನತಿಗಳೆರಡೂ ಓರ್ವ ಸಮರ್ಥ ಮುಖಂಡನನ್ನು ಅವಲಂಬಿಸಿಕೊಂಡಿರುತ್ತದೆ ಎಂದು ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು. ಕಟೀಲು ಶ್ರೀ...

Close