ದೇಶದ ಉನ್ನತಿ ನೇತಾರನ ಕೈಯಲ್ಲಿದೆ

ಕಿನ್ನಿಗೋಳಿ: ನಾಯಕತ್ವ ಗುಣವನ್ನು ವಿದ್ಯಾರ್ಥಿ ದೆಸೆಯಲ್ಲೇ ಮೈಗೂಡಿಸಿಕೊಳ್ಳಬೇಕು. ದೇಶದ ಉನ್ನತಿ ಮತ್ತು ಅವನತಿಗಳೆರಡೂ ಓರ್ವ ಸಮರ್ಥ ಮುಖಂಡನನ್ನು ಅವಲಂಬಿಸಿಕೊಂಡಿರುತ್ತದೆ ಎಂದು ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಟಾಟನಾ ಸಮಾರಂಭದಲ್ಲಿ ಮಾತನಾಡಿದರು.
ದೇವಳದ ಆಡಳಿತಾಕಾರಿ ನಿಂಗಯ್ಯ ವಿದ್ಯಾರ್ಥಿ ಸಂಘ ಉದ್ಟಾಟಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರೊ. ಜಗದೀಶ್ಚಂದ್ರ ಕೆ. ಕೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಕೇಶ್ ಮತ್ತು ಅವರ ತಂಡಕ್ಕೆ ಪ್ರತಿಜ್ಞಾ ವಿ ಬೋಸಿದರು. ದೇವಳದ ಮೊಕ್ತೇಸರ ವೇ.ಮೂ ಕೆ. ವಾಸುದೇವ ಆಸ್ರಣ್ಣ ಶುಭಾಶಂಸನೆಗೈದರು.
ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಪದ್ಮಲತಾ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕ ಪ್ರೊ. ಸುರೇಶ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭವ್ಯ ವಂದಿಸಿದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Kinnigoli-03081502

Comments

comments

Comments are closed.

Read previous post:
Kinnigoli-03081502
ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಮಾವೇಶ

ಕಿನ್ನಿಗೋಳಿ : ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರ ಸಮಾವೇಶವು ಇತ್ತೀಚೆಗೆ ನಡೆಯಿತು. ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ಕಚೇರಿಯ ಹಿರಿಯ ಅಕಾರಿ ಸಜ್ಜನ್ ದಾಸ್, ಕಿರೆಂ ಚರ್ಚ್ ಧರ್ಮಗುರು ಫಾ....

Close