ಏಳಿಂಜೆ: ಕಾಲು ಸಂಕ ದುರಸ್ತಿ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಲಕ್ಷ್ಮೀ ಜನಾರ್ಧನ ದೇವಳದ ಸಮೀಪದಲ್ಲಿ ಐದು ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ ಸುಮಾರು ಒಂದೂವರೆ ಲಕ್ಷ ಅನುದಾನದಿಂದ ನಿರ್ಮಿಸಿದ ಕಾಲು ಸಂಕ ಹೋದ ವರ್ಷದಿಂದ ಶಿಥಿಲಾವಸ್ಥೆಯತ್ತ ಸಾಗುತ್ತಿದ್ದು ಈ ಸಲದ ಮಳೆಗಾಲದಲ್ಲಿ ಕಾಲು ಸಂಕದ ಅಡಿಯಲ್ಲಿ ಹೊಂಡವೊಂದು ನಿರ್ಮಾಣವಾಗಿ ಕಟ್ಟದ್ದ ಕಲ್ಲುಗಳು ಸಡಿಲಗೊಂಡು ಒಂದು ಭಾಗ ಸಂಪೂರ್ಣ ಕುಸಿದ್ದಿತ್ತು. ಕಾಲು ಸಂಕ ಕುಸಿದಾಗ ಗ್ರಾಮಸ್ಥರು ಸುತ್ತು ಬಳಸಿ ಪಟ್ಟೆ ಗ್ರಾಮಕ್ಕೆ ಎರಡು ಕಿಲೋಮೀಟರ್ ದೂರದ ಹಾದಿ ಬಳಸಿ ಹೋಗುವಂತ ಪ್ರಮೇಯ ಬಂದಿತ್ತು. ಸ್ಥಳೀಯ ಐಕಳ ಗ್ರಾಮ ಪಂಚಾಯಿತಿ ಜವಾಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಿ ತ್ವರಿತವಾಗಿ ಕಲ್ಲುಗಳನ್ನು ನೀಡಿದ್ದು ಸ್ಥಳೀಯ ಗ್ರಾಮಸ್ಥರು ಮಕ್ಕಳು ಮಹಿಳೆಯರು ಸೇರಿ ತಾತ್ಕಲಿಕವಾಗಿ ಪಾದೆ ಕಲ್ಲುಗಳನ್ನು ತುಂಬಿ ಕಾಲು ಸಂಕ ದುರಸ್ತಿ ಪಡಿಸಿದರು.

ಐಕಳ ಗ್ರಾಮ ಪಂಚಾಯಿತಿ ಗ್ರಾಮಸ್ಥರ ಮನವಿಗೆ ಶೀಘ್ರ ಸ್ಪಂದನೆ ನೀಡಿದೆ. ಮಳೆಗಾಲ ನಿಂತ ನಂತರ ಪೂರ್ಣ ಪ್ರಮಾಣದ ದುರಸ್ತಿ ಕಾರ್ಯಕ್ಕೆ ಐಕಳ ಗ್ರಾಮ ಪಂಚಾಯಿತಿಯ ಮೂಲಕ ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಗ್ರಾಮಸ್ಥರ ಶ್ರಮದಾನ ಎಲ್ಲರಿಗೂ ಸ್ಪೂರ್ತಿ ತರಿಸಿದೆ.
ರವೀಂದ್ರ ಸುವರ್ಣ ಪಟ್ಟೆ
ಸ್ಥಳೀಯ ವಾರ್ಡ್ ಸದಸ್ಯ,ಐಕಳ ಗ್ರಾಮ ಪಂಚಾಯಿತಿ

Kinnigoli-03081504 Kinnigoli-03081505 Kinnigoli-03081506 Kinnigoli-03081507 Kinnigoli-03081508 Kinnigoli-03081509 Kinnigoli-03081510

Comments

comments

Comments are closed.

Read previous post:
Kinnigoli-03081503
ಭ್ರಾಮರೀ ಮಹಿಳಾ ಸಮಾಜ ಆಟಿಡೊಂಜಿ ದಿನ

ಕಿನ್ನಿಗೋಳಿ: ಹಿಂದಿನ ಕಾಲದ ಕಟ್ಟುಕಟ್ಟಳೆಗಳನ್ನು ರೂಢಿಸಿಕೊಂಡು ಸಮಾಜದ ಅಭಿವೃದ್ದಿಗೆ ಶ್ರಮಿಸಲು ಪಣತೊಡಬೇಕೆಂದು ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಹೇಳಿದರು. ಕಿನ್ನಿಗೋಳಿ ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ವತಿಯಿಂದ...

Close