ಕಿನ್ನಿಗೋಳಿ ಅಬ್ದುಲ್ ಕಲಾಂ ಅವರಿಗೆ ಶೃದ್ಧಾಂಜಲಿ

ಕಿನ್ನಿಗೋಳಿ : ಭಾರತದ ನೆಚ್ಚಿನ ರಾಷ್ಟ್ರಪತಿಯಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸರಳ ಜೀವನ, ಮಾನವೀಯತೆ ಮತ್ತು ಪರೋಪಕಾರಿ ಮನೋಭಾವವನ್ನು ನಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದು *ಸೌತ್‌ಕೆನೆರಾ ಪೋಟೋಗ್ರಾಫರ‍್ಸ್ ಅಸೋಸಿಯೇಶನ್‌ನ ಜಿಲ್ಲಾ ಅಧ್ಯಕ್ಷ ವಾಸುದೇವ ರಾವ್ ಹೇಳಿದರು.
ಸೌತ್‌ಕೆನೆರಾ ಪೊಟೋಗ್ರಾಫರ‍್ಸ್ ಅಸೋಸಿಯೇಶ್ ಮುಲ್ಕಿ ವಲಯದ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷದಲ್ಲಿ ಮಂಗಳವಾರ ನಡೆದ ಡಾ. ಎಪಿಜೆ ಅಬ್ದುಲ್ ಕಲಾಂ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ಮುಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್, ಮಾಜಿ ಅಧ್ಯಕ್ಷ ರಾಫಾಯಲ್ ರೆಬೆಲ್ಲೊ, ಕಾರ್ಯದರ್ಶಿ ಕೆ.ಬಿ ಸುರೇಶ್ ಪ್ರಮೋಟರ್ ಲೈನಲ್ ಪಿಂಟೊ, ಕೋಶಾಕಾರಿ ನಾಗರಾಜ್ ಬಪ್ಪನಾಡು, ಕ್ರೀಡಾ ಕಾರ್ಯದರ್ಶಿ ನವೀನ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Kinnigoli-03081511

Comments

comments

Comments are closed.

Read previous post:
Kinnigoli-03081510
ಏಳಿಂಜೆ: ಕಾಲು ಸಂಕ ದುರಸ್ತಿ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಲಕ್ಷ್ಮೀ ಜನಾರ್ಧನ ದೇವಳದ ಸಮೀಪದಲ್ಲಿ ಐದು ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ ಸುಮಾರು ಒಂದೂವರೆ ಲಕ್ಷ ಅನುದಾನದಿಂದ ನಿರ್ಮಿಸಿದ ಕಾಲು...

Close