ತುಳು ಲಿಪಿ ನಾಮಫಲಕ ಅನಾವರಣ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಬೊಳ್ಳೂರು ಮಿತ್ರ ಮಂಡಳಿ ಮತ್ತು ಸ್ಪೋರ್ಟ್ಸ್ ಕ್ಲಬ್ ಹಾಗೂ ಹಿಂದೂ ಜಾಗರಣ ವೇದಿಕೆ ಕೊಕುಡೆ ಸಂಸ್ಥೆಗಳ ಸಂಯೋಜನೆಯಲ್ಲಿ ನಿರ್ಮಿಸಿದ ಬೊಳ್ಳೂರು ತುಳು ಲಿಪಿಯ ನಾಮಫಲಕವನ್ನು ಭಾನುವಾರ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅನಾವರಣಗೊಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಸುಧಾಕರ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಬೊಳ್ಳೂರು ಮಿತ್ರ ಮಂಡಳಿ ಅಧ್ಯಕ್ಷ ಪ್ರಮೋದ್ ಕುಮಾರ್ ಆಚಾರ್ಯ, ಸ್ಪೋರ್ಟ್ಸ್ ಸಂಸ್ಥೆಯ ಅಧ್ಯಕ್ಷ ಸತೀಶ್ ಬೊಳ್ಳೂರು, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜೀವನ್ ತೋಕೂರು, ಸಂಯೋಜಕ ಕಿರಣ್ ತುಳುವ ಕೊಕುಡೆ, ರಾಘು ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-04081505

Comments

comments

Comments are closed.

Read previous post:
Kinnigoli-04081504
ನಾಗರಿಕ ಹಿತರಕ್ಷಣ ವೇದಿಕೆ ಅಧ್ಯಕ್ಷ ಮೀರಾ ಸಾಬ್

ಕಿನ್ನಿಗೋಳಿ: ಗುತ್ತಕಾಡು ಶಾಂತಿನಗರ ನಾಗರಿಕ ಹಿತರಕ್ಷಣ ವೇದಿಕೆಯ ಅಧ್ಯಕ್ಷರಾಗಿ ಮೀರಾ ಸಾಬ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ದಿವಾಕರ ಕರ್ಕೇರ, ಕಾರ್ಯದರ್ಶಿ ಅಬೂಬಕರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಮೋದ್ ಕುಮಾರ್, ಚಂದ್ರಶೇಖರ್,...

Close