ಡಾ. ಕಲಾಂ ಅವರಿಗೆ ಶ್ರದ್ಧಾಂಜಲಿ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಎನ್ ಸಿ ಸಿ ಹಾಗೂ ಎನ್‌ಎಸ್‌ಎಸ್ ಘಟಕ, ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಮತ್ತು ಮುಂಡ್ಕೂರು ಭಾರ್ಗವ ಜೆ.ಸಿ.ಐ ಜಂಟಿಯಾಗಿ ಶನಿವಾರದಂದು ವನಮಹೋತ್ಸವ ಕಾರ್ಯಕ್ರಮ ಆಚರಿಸಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಕಾಲೇಜು ಆವರಣ ಹಾಗೂ ಕಿರೆಂ ಚರ್ಚ್ ವಠಾರದಲ್ಲಿ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು. ಪೊಂಪೈ ಕಾಲೇಜು ಪ್ರಾಂಶುಪಾಲ ಡಾ. ಜೋನ್ ಕ್ಲಾರೆನ್ಸ್ ಮಿರಾಂದ, ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಜಾಕ್ಸನ್ ಸಲ್ದಾನ ಹಾಗೂ ಮುಂಡ್ಕೂರು ಭಾರ್ಗವ ಜೆ.ಸಿ.ಐ ಅಧ್ಯಕ್ಷ ಪ್ರೊ. ವಿಶ್ವಿತ್ ಶೆಟ್ಟಿ, ಎನ್‌ಸಿಸಿ ಅಕಾರಿ ಲೆಪ್ಟಿನೆಂಟ್ ಪುರುಷೋತ್ತಮ ಕೆ.ವಿ., ಎನ್‌ಎಸ್‌ಎಸ್ ಅಕಾರಿ ಸವಿತಾ ಕುಮಾರಿ, ಪ್ರೊ.ರಿಚರ್ಡ್ ಸಿಕ್ವೆರಾ, ರೋಟರ‍್ಯಾಕ್ಟ್ ಕ್ಲಬ್ ಕಾರ್ಯದರ್ಶಿ ವಿಜೇತ್ ಸಿಕ್ವೇರಾ, ಜೊತೆ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿಗಾರ್, ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Kinnigoli-04081508

Comments

comments

Comments are closed.

Read previous post:
Kinnigoli-04081507
ಯಕ್ಷಲಹರಿ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ತಾಳಮದ್ದಳೆ...

Close