ಯಕ್ಷಲಹರಿ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ತಾಳಮದ್ದಳೆ ಯಕ್ಷ ಸಂಘಟಕರು ಮತ್ತು*ಸಾಮಾಜಿಕ ಚಿಂತಕರ ನೆಲೆಯಲ್ಲಿ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವೈ.ಮೋನಪ್ಪ ಶೆಟ್ಟಿ ಮತ್ತು ವಾಘ್ಮಿ ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಅರ್ಚಕ ವೆಂಕಟರಮಣ ಆಸ್ರಣ್ಣ, ನಾರಾವಿ ಸೂರ್ಯನಾರಾಯಣ ದೇವಳ ಪ್ರಧಾನ ಅರ್ಚಕ ಕೃಷ್ಣ ತಂತ್ರಿ, ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಮೂಡಬಿದ್ರಿ ಉದ್ಯಮಿ ಶ್ರೀಪತಿ ಭಟ್, ಕಾರ್ಪೋರೇಶನ್ ಬ್ಯಾಂಕ್ ಪದ್ಮನೂರು ಶಾಖೆಯ ಹಿರಿಯ ಪ್ರಭಂದಕ ಪ್ರವೀಣ್ ಉಳ್ಳಾಲ್, ಅಗರಿ ರಘುರಾಮ ಭಾಗವತ,. ಯಕ್ಷಲಹರಿ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ, ಕಾರ್ಯದರ್ಶಿ ಪಿ. ಸತೀಶ್ ರಾವ್, ರಘುನಾಥ ಕಾಮತ್ ಕೆಂಚನಕೆರೆ ಉಪಸ್ಥಿತರಿದ್ದರು.

Kinnigoli-04081507

Comments

comments

Comments are closed.

Read previous post:
Kinnigoli-04081506
ಕಾಲೇಜಿಗೆ ವಾಹನ ತಂಗುದಾಣ ಕೊಡುಗೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಶಿಕ್ಷಕ-ರಕ್ಷಕ ಸಂಘ ೨ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಾಹನ ತಂಗುದಾಣ ನಿರ್ಮಿಸಿರುತ್ತದೆ. ವಾಹನ ತಂಗುದಾಣವನ್ನು...

Close