ಯಕ್ಷಲಹರಿಯ ಶ್ರಮ ಶ್ಲಾಘನೀಯ

 ಕಿನ್ನಿಗೋಳಿ: ಪುರಾಣ ಕಥೆಗಳು ಧಾರ್ಮಿಕ ಚಿಂತನೆಯೊಂದಿಗೆ ಪ್ರಾಜ್ಞಾವಂತ ಸಮಾಜ ನಿಮಾರ್ಣವಾಗಲು ಮಾರ್ಗದರ್ಶಿಯಾಗುತ್ತದೆ ಎಂದು ಕಟೀಲು ಕ್ಷೇತ್ರದ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ರಜತ ವರ್ಷ ಸಂಭ್ರಮ ೨೦೧೫ ಪ್ರಯುಕ್ತ ಗುರುವಾರ ಯಕ್ಷಲಹರಿ, ಯುಗಪುರುಷ ಸಂಯೋಜನೆಯಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಬಯಲಾಟ ಅಕಾಡಮಿ ಸಹಯೋಗದಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ತಾಳಮದ್ದಲೆ ದಶಾಹ ಯತೋಧರ್ಮಃ ತತೋಜಯಃ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶುಭಾಶಂಶನೆಗೈದ ಕಟೀಲು ದೇವಳದ ಅರ್ಚಕ ಕೆ. ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಗದ್ಯ ಪದ್ಯ ದೃಶ್ಯ ಕಲಾ ಪ್ರಾಕಾರಗಳ ಸಂಯೋಜ ತಾಳಮದ್ದಲೆ ಅಗ್ರ ಸ್ಥಾನಿಯಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ೨೫ವರ್ಷಗಳಿಂದ ಕಿನ್ನಿಗೋಳಿ ಮತ್ತು ಪರಿಸರದ ಗ್ರಾಮೀಣ ಪ್ರದೇಶದಲ್ಲಿ ಹಿರಿಯರೊಂದಿಗೆ ಉದಯೋನ್ಮುಕರ ಬೆಳವಣಿಗೆಗೆ ವೇದಿಕೆ ಕಲ್ಪಿಸಿದ ಯಕ್ಷಲಹರಿಯ ಶ್ರಮ ಶ್ಲಾಘನೀಯ.
ಈ ಸಂದರ್ಭ ಯಕ್ಷಕವಿಗಳು ಮತ್ತು ಪ್ರಸಂಗಕರ್ತರಾದ ಮಧೂರು ವೆಂಕಟಕೃಷ್ಣ, ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಅವರನ್ನು ಸನ್ಮಾನಿಸಲಾಯಿತು.
ಅತ್ತೂರು ಬೈಲು ಮಹಾಗಣಪತಿ ಮಂದಿರದ ವೆಂಕಟರಾಜ ಉಡುಪ, ಅಶ್ವಥ ಪುರ ಯಕ್ಷ ಚೈತನ್ಯ ಸಂಚಾಲಕ ಸದಾಶಿವ ನೆಲ್ಲಿಮಾರು, ಸಿಂಡಿಕೇಟ್ ಬ್ಯಾಂಕ್ ಕುಲಶೇಖರ ಶಾಖಾ ಪ್ರಭಂದಕ ಮಂಜುನಾಥ ಮಲ್ಯ, ಕಿನ್ನಿಗೋಳಿ ಶಾಖಾ ಪ್ರಭಂದಕ ಜೈಕಿಷನ್, ಯುಕೋ ಬ್ಯಾಂಕ್ ಪ್ರಭಂದಕ ಯು.ವಿ.ತಂತ್ರಿ, ಕೆನರಾ ಬ್ಯಾಂಕ್ ಹಿರಿಯ ಪ್ರಭಂದಕ ಕೆ.ಎನ್.ಸುಧಾಕರ, ಉದ್ಯಮಿ ಶ್ರೀಪತಿ ಭಟ್. ಯುಗಪುರುಷ ಪ್ರಧಾನ ಸಂಪಾದಕ ಕೆ, ಭುವನಾಭಿರಾಮ ಉಡುಪ, ಯಕ್ಷಲಹರಿ ಅಧ್ಯಕ್ಷ ಇ.ಶ್ರೀನಿವಾಸ ಭಟ್, ಕಾರ್ಯದರ್ಶಿ ಪಿ.ಸತೀಶ್ ರಾವ್, ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ, ಕೋಶಾಕಾರಿ ಜಗದೀಶ ಹೊಳ್ಳ ಉಪಸ್ಥಿತರಿದ್ದರು. ಕೆಂಚನಕೆರೆ ರಘುನಾಥ ಕಾಮತ್ ನಿರೂಪಿಸಿದರು.

Kinnigoli-04081501

Comments

comments

Comments are closed.

Read previous post:
Kinnigoli-03081511
ಕಿನ್ನಿಗೋಳಿ ಅಬ್ದುಲ್ ಕಲಾಂ ಅವರಿಗೆ ಶೃದ್ಧಾಂಜಲಿ

ಕಿನ್ನಿಗೋಳಿ : ಭಾರತದ ನೆಚ್ಚಿನ ರಾಷ್ಟ್ರಪತಿಯಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸರಳ ಜೀವನ, ಮಾನವೀಯತೆ ಮತ್ತು ಪರೋಪಕಾರಿ ಮನೋಭಾವವನ್ನು ನಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದು...

Close