ಹಿರಿಯರ ಜ್ಞಾನ ಭಂಡಾರ ತಾಳಮದ್ದಲೆ ಶ್ರೀಮಂತ

ಕಿನ್ನಿಗೋಳಿ : ಹಿರಿಯರು ಅಪಾರ ಜ್ಞಾನ ಭಂಡಾರ, ಪದಗುಚ್ಚಗಳಿಂದ ಯಕ್ಷಗಾನ ತಾಳಮದ್ದಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇದರಿಂದಾಗಿ ಸಂಸ್ಕೃತಿ ಮತ್ತು ಸಂಸ್ಕಾರಗಳು ಬೆಳೆಯುತ್ತಿದೆ. ಎಂದು ಹಿರಿಯ ಕೃಷಿ ಸಾಧಕ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಮಾಜಿ ಆಡಳಿತ ಮೊಕ್ತೇಸರ ವೈ.ಬಾಲಚಂದ್ರ ಭಟ್ ಹೇಳಿದರು.
ಸೋಮವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಕಿನ್ನಿಗೋಳಿ ಮತ್ತು ಯುಗಪುರುಷ ಆಶ್ರಯದಲ್ಲಿ ಯಕ್ಷಲಹರಿ ರಜತ ಸಂಭ್ರಮ ಆಚರಣೆ ಹಾಗೂ ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ತಾಳಮದ್ದಳೆ ದಶಾಹ ಯತೋಧರ್ಮ: ತತೋಜಯ: ಸಭಾ ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೈ.ಯೋಗೀಶ್ ರಾವ್ ಏಳಿಂಜೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಾಧಕರ ನೆಲೆಯಲ್ಲಿ ಕಿನ್ನಿಗೋಳಿಯ ಹಿರಿಯ ವೈದ್ಯ ಡಾ.ಕ್ಲೆಮೆಂಟ್ ಕುಟಿನ್ಹೊ ಮತ್ತು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಮಾಜಿ ಆಡಳಿತ ಮೊಕ್ತೇಸರ ವೈ.ಬಾಲಚಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕರ್ನಾಟಕ ಬ್ಯಾಂಕ್ ಐಕಳ ಶಾಖಾ ಪ್ರಭಂದಕ ರಘುರಾಮ ಕಾರಂತ್, ಲಯನ್ಸ್ ಮಾಜಿ ಪ್ರಾಂತ್ಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಯಕ್ಷಲಹರಿಯ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ,ಕಾರ್ಯದರ್ಶಿ ಪಿ.ಸತೀಶ ರಾವ್, .ಶ್ರೀವತ್ಸ ಮತ್ತು ಉಮೇಶ್ ನೀಲಾವರ ಉಪಸ್ಥಿತರಿದ್ದರು.
ವಿನಯ ಆಚಾರ್ ಹೊಸಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Kinnigoli-04081513

Comments

comments

Comments are closed.

Read previous post:
Kinnigoli-04081512
ಭಾಷೆ ಸಂಸ್ಕೃತಿಯ ತಾಳಮದ್ದಲೆ

ಕಿನ್ನಿಗೋಳಿ : ಕರಾವಳಿ ಪ್ರದೇಶದ ಭಾಷೆ ಸಂಸ್ಕೃತಿಯ ಏಳಿಗೆಗಾಗಿ ತಾಳಮದ್ದಲೆ ಪ್ರತ್ಯಕ್ಷವಾಗಿ ಕಾರಣವಾಗಿದೆ. ಯುವ ಸಮಾಜವನ್ನು ಸೆಳೆಯುವುದರಲ್ಲಿ ಯಕ್ಷಲಹರಿಯ ಕಾರ್ಯ ಮಾರ್ಗದರ್ಶಿಯಾಗಿದೆ ಎಂದು ದಾರ್ಮಿಕ ಚಿಂತಕ ಕೊಲೆಕಾಡಿ ವಾದಿರಾಜ...

Close