ತಾಳಮದ್ದಲೆಯಿಂದ ಕಲಾವಿದ ಪ್ರಬುದ್ದ

ಕಿನ್ನಿಗೋಳಿ : ಯಕ್ಷಲಹರಿ ಸಂಸ್ಥೆಯು ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ತಾಳ ಮದ್ದಲೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರನ್ನು ಪ್ರಬುದ್ದಗೊಳಿಸಿ ಯಕ್ಷಗಾನ ಕ್ಷೇತ್ರವನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ಮಾಡಿ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ. ಎಂದು ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಕಿನ್ನಿಗೋಳಿ ಮತ್ತು ಯುಗಪುರುಷ ಆಶ್ರಯದಲ್ಲಿ ಯಕ್ಷಲಹರಿ ರಜತ ಸಂಭ್ರಮ ಆಚರಣೆ ಹಾಗೂ ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ತಾಳಮದ್ದಳೆ ದಶಾಹ ಯತೋಧರ್ಮ: ತತೋಜಯ: ಐದನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಗುರುರಾಜ್ ಭಟ್ ಆಶೀವರ್ಚನ ನೀಡಿದರು.
ಈ ಸಂದರ್ಭ ಸುರತ್ಕಲ್ ಆಡ್ ಮ್ಯಾಟ್ರಿಕ್ಸ್ ಮಾಲಕ ಗುರುರಾಜ್ ಉಡುಪ ಮತ್ತು ಶಾಂತಿನಗರ ಗುತ್ತಕಾಡು ಶ್ರೀ ಮೂಕಾಂಬಿಕ ದೇವಳದ ಧರ್ಮದರ್ಶಿ ವಿವೇಕಾನಂದ ಅವರನ್ನು ಸನ್ಮಾನಿಸಲಾಯಿತು

ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಯಕ್ಷಲಹರಿ ಕಾರ್ಯದರ್ಶಿ ಪಿ. ಸತೀಶ ರಾವ್ ಸ್ವಾಗತಿಸಿದರು. ವೈ ಕೃಷ್ಣರಾಜ ಭಟ್ ಮತ್ತು ವಿನಯ್ ಆಚಾರ್ ಹೊಸಬೆಟ್ಟು ಪ್ರಶಸ್ತಿ ಪತ್ರ ವಾಚಿಸಿದರು ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Kinnigoli-04081514

 

Comments

comments

Comments are closed.

Read previous post:
Kinnigoli-04081513
ಹಿರಿಯರ ಜ್ಞಾನ ಭಂಡಾರ ತಾಳಮದ್ದಲೆ ಶ್ರೀಮಂತ

ಕಿನ್ನಿಗೋಳಿ : ಹಿರಿಯರು ಅಪಾರ ಜ್ಞಾನ ಭಂಡಾರ, ಪದಗುಚ್ಚಗಳಿಂದ ಯಕ್ಷಗಾನ ತಾಳಮದ್ದಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇದರಿಂದಾಗಿ ಸಂಸ್ಕೃತಿ ಮತ್ತು ಸಂಸ್ಕಾರಗಳು ಬೆಳೆಯುತ್ತಿದೆ. ಎಂದು ಹಿರಿಯ ಕೃಷಿ ಸಾಧಕ ಸುರಗಿರಿ ಶ್ರೀ ಮಹಾಲಿಂಗೇಶ್ವರ...

Close