ಭಾಷೆ ಸಂಸ್ಕೃತಿಯ ತಾಳಮದ್ದಲೆ

ಕಿನ್ನಿಗೋಳಿ : ಕರಾವಳಿ ಪ್ರದೇಶದ ಭಾಷೆ ಸಂಸ್ಕೃತಿಯ ಏಳಿಗೆಗಾಗಿ ತಾಳಮದ್ದಲೆ ಪ್ರತ್ಯಕ್ಷವಾಗಿ ಕಾರಣವಾಗಿದೆ. ಯುವ ಸಮಾಜವನ್ನು ಸೆಳೆಯುವುದರಲ್ಲಿ ಯಕ್ಷಲಹರಿಯ ಕಾರ್ಯ ಮಾರ್ಗದರ್ಶಿಯಾಗಿದೆ ಎಂದು ದಾರ್ಮಿಕ ಚಿಂತಕ ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು.
ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ತಾಳಮದ್ದಳೆ ದಶಾಹಃ ಯತೋಧರ್ಮ: ತತೋಜಯ: ನಾಲ್ಕನೇ ದಿನದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈ ಸಂದರ್ಭ ಸಾಧಕರ ನೆಲೆಯಲ್ಲಿ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ನಿವೃತ್ತ ಮಹಾ ಪ್ರಭಂದಕ ಕೃಷ್ಣ ಶೆಣೈ, ಉದ್ಯಮಿ ಮಾಧವ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಬಜ್ಪೆ ಕನ್ನಿಕಾ ನಿಲಯದ ಯಾದವ ಕೋಟ್ಯಾನ್ ಮತ್ತು ಕಾವೂರು ಕೆ.ಶ್ರೀನಿವಾಸ ಭಟ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಟೀಲು ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಒರಿಯಂಟಲ್ ಇನ್ಸೂರೆನ್ಸ್ ಸುರತ್ಕಲ್ ಶಾಖಾ ಪ್ರಭಂದಕ ಯಾದವ ದೇವಾಡಿಗ, ರೋಟರಿ ಮಾಜಿ ಸಹಾಯಕ ಗವರ್ನರ್ ಮಂಜುನಾಥ ಉಪಾದ್ಯಾಯ ಪರ್ಕಳ, ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಮಂಗಳೂರು ಗುರು ರಾಘವೇಂದ್ರ ಸ್ವಾಮಿ ಮಠದ ಜಯರಾಮ ಉಡುಪ, ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಯಕ್ಷಲಹರಿ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ, ಕೋಶಾಧಿಕಾರಿ ಪ್ರೊ. ಕೆ.ಜಗದೀಶ ಹೊಳ್ಳ ಉಪಸ್ಥಿತರಿದ್ದರು.
ಯಕ್ಷಲಹರಿ ಕಾರ್ಯದರ್ಶಿ ಪಿ. ಸತೀಶ್ ರಾವ್ ಸ್ವಾಗತಿಸಿ. ಶ್ರೀವತ್ಸ ಮತ್ತು ರಘುನಾಥ ಕಾಮತ್ ಪ್ರಶಸ್ತಿ ಪತ್ರ ವಾಚಿಸಿದರು. ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಧಾಕೃಷ್ಣ ಭಟ್ ಪೆರ್ಲ ವಂದಿಸಿದರು.

Kinnigoli-04081512

Comments

comments

Comments are closed.

Read previous post:
Kinnigoli-04081511
ಕಟೀಲು : ಭರತನಾಟ್ಯ ಕೇಂದ್ರ ಉದ್ವಾಟನೆ

ಆತ್ಮಶಕ್ತಿ, ಆತ್ಮಸ್ಥೈರ್ಯ ಮತ್ತು ಉತ್ತಮ ಸಂಸ್ಕಾರ ಭರತನಾಟ್ಯ ಕಲಿಯುವುದರಿಂದ ಲಭಿಸುತ್ತದೆ. ಎಂದು ಭರತನಾಟ್ಯ ಶಿಕ್ಷಕಿ ಪ್ರತಿಮಾ ಶ್ರೀಧರ್ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ...

Close