ಮೂಲ್ಕಿ ಪ್ರೆಸ್ ಕ್ಲಬ್ ಉದ್ಘಾಟನಾ ಸಮಾರಂಭ

ಮೂಲ್ಕಿ: ಆಧುನಿಕ ಯುಗದಲ್ಲಿ ಮಾಧ್ಯಮವು ಮೂಲಭೂತ ಸೌಕರ್ಯಗಳ ಭಾಗವಾಗಿದೆ ಇದೇ ರೀತಿ ಸಾರ್ವಜನಿಕ ಜನಜೀವನ ಪ್ರಮುಖ್ಯ ವ್ಯವಸ್ಥೆಯಾಗಿ ಮಾರ್ಪಟ್ಟಿದೆ ಎಂದು ರಾಜ್ಯ ಮೀನುಗಾರಿಕೆ ಯುವಜನ ಸೇವೆ, ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ಶುಕ್ರವಾರ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಮೂಲ್ಕಿ ಪ್ರೆಸ್ ಕ್ಲಬ್ ಉದ್ಘಾಟಿಸಿ ಮಾತನಾಡಿ ಪತ್ರಕರ್ತರ ಮೇಲೆ ವಿಶೇಷ ಜವಾಬ್ದಾರಿ ಇದೆ ಸಾರ್ವಜನಿಕ ಜನಜೀವನದ ಭಾಗವಾಗಿ ಗುರುತಿಸಿಕೊಂಡು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿ ಎಂದರು.
ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮಕ್ಕೆ ಚಾಳನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಪತ್ರಿಕಾ ಸಂಗ್ರಾಹಕ ಉಮೇಶ್ ರಾವ್ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು ಸನ್ಮಾನಕ್ಕೆ ಉತ್ತರಿಸಿದ ಉಮೇಶ್ ರಾವ್ ಪ್ರತಿಕೆಯನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಮೂಲ್ಕಿಯ ಪ್ರತಿಕಾ ವಿತರಕ ಗಂಗಾಧರ ಶೆಟ್ಟಿ ಅವರನ್ನು ಜಯಾಕಿರಣ ಪತ್ರಿಕಾ ಮಾಲೀಕ ಪ್ರಕಾಶ್ ಪಾಂಡೇಶ್ವರ ಹಾಗೂ ಮೂಲ್ಕಿ ಪ್ರೆಸ್ ಕ್ಲಬ್ ವತಿಯಿಂದ ಮಾಧ್ಯಮ ಪ್ರೋತ್ಸಹ ನೀಡಲಾಯಿತು.
ಮೂಲ್ಕಿ ನ.ಪಂ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಉಪಾಧ್ಯಕ್ಷೆ ವಸಂತಿ ಭಂಡಾರಿ, ವಿಶೇಷ ತಹಶೀಲ್ದಾರ್, ಎ.ಜಿ.ಖೇಣಿ, ಮೂಲ್ಕಿ ಪೋಲೀಸ್ ನಿರೀಕ್ಷಕ ರಾಮಚಂದ್ರ ನಾಯ್ಕ್, ಮಂಗಳೂರು ಉತ್ತರವಲಯ ಸಂಚಾರ ವಿಭಾಗ ಇನ್ಸ್‌ಪೆಕ್ಟರ್ ಮಂಜುನಾಥ್, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಜಿ.ಪಂ ಸದಸ್ಯರಾದ ಈಶ್ವರ ಕಟೀಲು, ಆಶಾ ರಾಮದಾಸ್, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ಚಂದ್ರ ಪಿ. ಸಾಲ್ಯಾನ್, ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ವಿಜಯಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ಗ್ರಹರಕ್ಷಕದಳದ ಮೂಲ್ಕಿ ಘಟಕಾಧಿಕಾರಿ ಮನ್ಸೂರ್, ಸಚ್ಚಿದಾನಂದ, ಜನಾರ್ದನ ಕಿಲೆಂಜೂರು, ಪ್ರೇಮಶ್ರೀ ಕಲ್ಲಬೆಟ್ಟು, ಕಸ್ತೂರಿ ಪಂಜ, ಪ್ರೊ.ಜಯರಾಮ ಪೂಂಜ, ಮೂಲ್ಕಿ ಬಂಟ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ವಸಂತ ಬೆರ್ನಾಡ್, ಅಶೋಕ್ ಕುಮಾರ್ ಚಿತ್ರಾಫು, ಬಾಲಚಂದ್ರ ಸನಿಲ್, ಶೇಖರ ಹೆಜ್ಮಾಡಿ, ಯುವವಾಹಿನಿ ಸತೀಶ್ ಕುಮಾರ್, ಪರಮಾನಂದ ಸಾಲ್ಯಾನ್, ಶಶೀಂದ್ರ ಎಮ್ ಸಾಲ್ಯಾನ್, ಪುತ್ತುಬಾವ, ಬಶೀರ್‌ಕುಳಾ, ಡಾ|ಗುರುಪ್ರಸಾದ್ ನಾವಡ, ಬೇಬಿ ಸುಂದರ ಕೋಟ್ಯಾನ್, ಅಡ್ವೆ ರವೀಂದ್ರಪೂಜಾರಿ, ನವೀನ್ ಕುಮಾರ್ ಕಟೀಲು. ಮತ್ತಿತರರು ಉಪಸ್ಥಿತರಿದ್ದರು.
ಪತ್ರಿಕಾ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ, ಉಮೇಶ್‌ರಾವ್ ಎಕ್ಕಾರು ಅವರ ಅಮೂಲ್ಯವಾದ ಪತ್ರಿಕಾ ಪ್ರದರ್ಶನ, ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತಪೋವನ ಡಾ| ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾದ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಬಾಲಕಾರ್ಮಿಕ ಪದ್ಥತಿ ನಿಷೇಧಿಸುವ ಜಾಗೃತಿಯ ನೃತ್ಯ ರೂಪಕ ಪ್ರದರ್ಶನ, ಪತ್ರಕರ್ತ ಪ್ರಕಾಶ್ ಸುವರ್ಣ ಕಟಪಾಡಿ ನಿರ್ದೇಶನದ ಪ್ರಶಸ್ತಿ ವಿಜೇತ ಕಿರುಚಿತ್ರ ಪ್ರದರ್ಶನ ನಡೆಯಿತು.
ಮೂಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು ಕಾರ್ಯದರ್ಶಿ ಭಾಗ್ಯವಾನ್‌ ಸನಿಲ್ ವಂದಿಸಿದರು.

Bhagyavan Sanil

Mulki-05081502

Comments

comments

Comments are closed.

Read previous post:
Mulki-05081501
ಮೂಲ್ಕಿಯಲ್ಲಿ ಕಾರ್ಗಿಲ್ ವಿಜಯ ರಥಯಾತ್ರೆ

ಮೂಲ್ಕಿ: ಕಳೆದ ವರ್ಷಗಳ ಹಿಂದೆ ಸತತ 74 ದಿನಗಳಲ್ಲಿ ನಡೆದ ಕಾರ್ಗಿಲ್ ವಿಜಯದ ನೆನಪಿಗಾಗಿ ಯುವಕರ ಪ್ರಕಾರ ರಾಷ್ಟ್ರೀಯತೆಯನ್ನು ಮೂಡಿಸಲು“ಯುವಬ್ರಿಗೇಡ್” ಕಾರ್ಗಿಲ್" ವಿಜಯೋತ್ಸವವನ್ನು ಹಮ್ಮಿಕೊಂಡಿದೆ. ದೇಶದ ಚಾರಿತ್ರ್ಯವಂತ...

Close