ದುರ್ಗೆಯ ಆರಾಧನೆಯಿಂದ ಲೋಕಕಲ್ಯಾಣ

ಮೂಲ್ಕಿ: ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡುವುದರಿಂದ ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಬಹುದು. ಜೀವನದಲ್ಲಿ ಮುಂದೆ ಬರಬೇಕಾದರೆ ದೇವರ ಆಶೀರ್ವಾದವೂ ಮುಖ್ಯ.ಆಷಾಢ ಹುಣ್ಣಿಮೆಯ ದಿನದಂದು ದುರ್ಗೆಯ ಆರಾಧಿಸಿದರೆ ಲೋಕಕಲ್ಯಾಣ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದರು.
ಪದ್ಮಶ್ರೀ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಲೆಕಾಡಿಯಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜ್ಯೋತಿಷಿ ವಿಶ್ವನಾಥ ಭಟ್, ಪುನೀತ ಕೃಷ್ಣ, ಗೋಪಾಲಕೃಷ್ಣ ಉಪಾದ್ಯಾಯ, ರಾಜೇಶ್ ಭಟ್ ಕೆರೆಕಾಡು, ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು.
ಪದ್ಮಶ್ರೀ ಚ್ಯಾರಿಟೇಬಲ್ ಟ್ರಸ್ಟ್ ವೇದಮೂರ್ತಿ ವಾಧಿರಾಜ ಉಪಾಧ್ಯಾಯ ಸ್ವಾಗತಿಸಿದರು, ಶ್ರೀವಿದ್ಯಾ ಧನ್ಯವಾದ ಆರ್ಪಿಸಿದರು. ಶಶಿಕಲಾ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದುರ್ಗಾ ಪೂಜೆ ನಿಮಿತ್ತ ಮಕ್ಕಳಿಗೆ ಕನ್ನಿಕೆ ದಾನ ನೀಡಲಾಯಿತು.

Kinnigoli-05081503

Comments

comments

Comments are closed.

Read previous post:
Kinnigoli-05081502
ಕಿನ್ನಿಗೋಳಿ: ತಾಳಮದ್ದಳೆ ದಶಾಹ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಲೆಯಂತಹ ಕಲಾ ಪ್ರಾಕಾರಗಳು ಯುವ ಪೀಳಿಗೆಯಲ್ಲಿ ಸಂಸ್ಕೃತಿ ಸಂಸ್ಕಾರದ ಜೊತೆಗೆ ಭಾಷಾ ಫ್ರೌಡಿಮೆಯನ್ನು ಬೆಳೆಸುತ್ತದೆ. ಹೆತ್ತವರು ತಮ್ಮ ಮಕ್ಕಳನ್ನು ತಾಳಮದ್ದಲೆ ಕಾರ್ಯಕ್ರಮಕ್ಕೆ ಕರೆತಂದು ಅವರಲ್ಲಿ ಆಸಕ್ತಿ...

Close