ಕಿನ್ನಿಗೋಳಿ ಸುವ್ಯವಸ್ಥೆ ಪಾರ್ಕಿಂಗ್ ಮನವಿ

ಕಿನ್ನಿಗೋಳಿ: ಮುಲ್ಕಿ- ಮೂಡಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ನಡುವೆ ಇರುವ ಕಿನ್ನಿಗೋಳಿ ತ್ವರಿತಗತಿಯಿಂದ ಬೆಳೆಯುತ್ತಿದ್ದು ಪೇಟೆಯ ಹೃದಯ ಭಾಗದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಕಂಡು ಬರುತ್ತಿದೆ. ಘನ ವಾಹನ, ಲಘು ವಾಹನ, ಮತ್ತು ದ್ವಿಚಕ್ರ ವಾಹನಗಳು ಪೇಟೆಯ ಇಕ್ಕೆಲೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆಗೊಳಿಸುವುದರ ಬಗ್ಗೆ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಪಂಚಾಯಿತಿಗಳು, ಸುರತ್ಕಲ್ ಟ್ರಾಫಿಕ್ ಪೋಲೀಸ್ ಇಲಾಖೆಯ ಸಮ್ಮುಖದಲ್ಲಿ ಬಸ್ಸು,ಕಾರು, ಟೆಂಪೊ ಹಾಗೂ ರಿಕ್ಷಾ ಚಾಲಕ ಮಾಲಕರ ಜಂಟೀ ಸಭೆ ಮಂಗಳವಾರ ನಡೆಯಿತು.
ಟ್ರಾಫಿಕ್ ಪೋಲೀಸರು, ವಾಹನಗಳ ಚಾಲಕ ಮಾಲಕರು ಹಾಗೂ ನಾಗರೀಕರು ಅನೇಕ ಸಲಹೆ ಚರ್ಚೆಗಳನ್ನು ನಡೆಸಿದರು. ಮುಖ್ಯ ರಸ್ತೆಯಲ್ಲಿ ವಾಹನಗಳ ನಿಭಿಡತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ ಈ ಬಗ್ಗೆ ವಿಜಯಕರ್ನಾಟಕ ಪತ್ರಿಕೆ ಅಪಘಾತ ವಲಯದ ಬಗ್ಗೆ ಅಭಿಯಾನದಲ್ಲಿ ಉಲ್ಲೇಖಿಸಿತ್ತು. ಮಾಧ್ಯಮ ವರದಿಯನ್ನು ಕಂಡಪೋಲೀಸ್ ಇಲಾಖೆ ಪಂಚಾಯಿತಿ ವಾಹನ ಚಾಲಕ ಮಾಲಕರು ಹಾಗೂ ನಾಗರೀಕರನ್ನು ಒಗ್ಗೂಡಿಸಿ ಅಪಘಾತ ರಹಿತ ವಲಯವನ್ನಾಗಿ ಮಾರ್ಪಾಡಿಸುವ ಬಗ್ಗೆ ಸಭೆ ನಡೆಸಿದರು.
ವಾಹನ ನಿಭಿಡತೆಯಿಂದ ಮುಖ್ಯ ರಸ್ತೆಯ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳು ಗ್ರಾಹಕರ ವಾಹನಗಳು ಹಾಗು ರಿಕ್ಷಾ ಚಾಲಕರಿಗೆ ತುಂಬಾ ತೊಂದರೆಯಾಗಿದ್ದು ಕಿನ್ನಿಗೋಳಿ ಸುಖಾನಂದ ವೃತ್ತ ಬಳಿ ರಿಕ್ಷಾ ನಿಲುಗಡೆ ಮಾಡುವ ಬಗ್ಗೆ ವಾದ-ವಿವಾದ ಚರ್ಚೆ ನಡೆದು ರಿಕ್ಷಾ ಪಾರ್ಕಿನಲ್ಲಿ ಕೇವಲ ೫ ರಿಕ್ಷಾಗಳನ್ನು ನಿಲುಗಡೆ ಮಾಡಬೇಕು ಎಂದು ಪೋಲೀಸರು ಸೂಚಿಸಿದರು. ಕಿನ್ನಿಗೋಳಿ ಬಸ್ಸು ನಿಲ್ದಾಣದಿಂದ ಹೊರಟ ಬಸ್ಸುಗಳು ಮುಖ್ಯ ರಸ್ತೆಯಲ್ಲಿ ವಿನಾಕಾರಣ ನಿಲ್ಲಿಸುವುದು ಅಪಾಯಕಾರಿಯಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಬಸ್ಸು ಚಾಲಕ ನಿರ್ವಾಹಕ ಸಂಘದ ಅಧ್ಯಕ್ಷ ಭಾಸ್ಕರ್ ಉಲ್ಲಂಜೆ ಮಾತನಾಡಿ ನಮ್ಮ ಸಂಘದ ಲ್ಲಿರುವ ಬಸ್ಸು ಚಾಲಕರಿಗೆ ಬಸ್ಸು ನಿಲುಗಡೆ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಆದರೆ ಸಂಘದಲ್ಲಿರದ ಕೆಲ ಬಸ್ಸಿನ ಚಾಲಕರು ಅವಾಂತರ ಸೃಷ್ಠಿಸುತ್ತಿದ್ದಾರೆ ಎಂದು ಹೇಳಿದರು.
ಉತ್ತರ ಸಂಚಾರಿ ಠಾಣಾ ಟ್ರಾಫಿಕ್ ಪೋಲೀಸ್ ನಿರೀಕ್ಷಕ ಮಂಜುನಾಥ್ ಮಾತನಾಡಿ ಮುಂಬರುವ ದಿನಗಳಲ್ಲಿ ಸಂಚಾರಕ್ಕೆ ತೊಂದರೆ ತಂದೊಡ್ಡುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು ಸಾರ್ವಜನಿಕರೆ ತಾವೇ ಸ್ವಯಂ ಪ್ರೇರಣೆ ಮತ್ತು ಸುರಕ್ಷತೆಯ ಬಗ್ಗೆ ಗಮನ, ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಇತರ ವಾಹನಗಳ ನಿಲುಗಡೆಯ ಬಗ್ಗೆ ಪಂಚಾಯಿತಿ ಹಾಗೂ ನಾಗರಿಕರು ಗಮನಕೊಡಬೇಕು ಬಸ್ಸುಗಳ ಸರಾಗ ಚಾಲನೆಗೆ ದಾರಿ ಮಾಡಬೇಕಾಗಿದೆ.
ಲಘು ವಾಹನಹಾಗೂ ದ್ವಿಚಕ್ರ ವಾಹನಗಳಿಗೆ ಪರ್ಯಾಯ ನಿಲುಗಡೆಯ ವ್ಯವಸ್ಥೇ ಹಾಗೂ ಬಸ್ಸುನಿಲ್ದಾಣದಿಂದ ಕಿನ್ನಿಗೋಳಿ ಮಾರುಕಟ್ಟೆಯವರೆಗೆ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಒತ್ತಾಯ ಬಸ್ಸು ಮಾಲಕರು ಪಂಚಾಯಿತಿ ಆಡಳಿತ ಹಾಗೂ ಪೋಲೀಸ್ ಇಲಾಖೆಗೆ ಮನವರಿಕೆ ಮಾಡಿದರು.
Kinnigoli-05081501

Comments

comments

Comments are closed.

Read previous post:
Kinnigoli-05081513
ಯೋಜನೆಗಳನ್ನು ಸದುಪಯೋಗಪಡಿಸಬೇಕು

ಕಿನ್ನಿಗೋಳಿ: ಶಾಲೆಯ ವಿದ್ಯಾರ್ಥಿಗಳು ಸರಕಾರದಿಂದ ನೀಡಲ್ಪಡುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು. ಕಿನ್ನಿಗೋಳಿ ಸಮೀಪದ ಗುತ್ತಕಾಡು ದ.ಕ. ಜಿಲ್ಲಾ...

Close