ಕಿನ್ನಿಗೋಳಿ: ತಾಳಮದ್ದಳೆ ದಶಾಹ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಲೆಯಂತಹ ಕಲಾ ಪ್ರಾಕಾರಗಳು ಯುವ ಪೀಳಿಗೆಯಲ್ಲಿ ಸಂಸ್ಕೃತಿ ಸಂಸ್ಕಾರದ ಜೊತೆಗೆ ಭಾಷಾ ಫ್ರೌಡಿಮೆಯನ್ನು ಬೆಳೆಸುತ್ತದೆ. ಹೆತ್ತವರು ತಮ್ಮ ಮಕ್ಕಳನ್ನು ತಾಳಮದ್ದಲೆ ಕಾರ್ಯಕ್ರಮಕ್ಕೆ ಕರೆತಂದು ಅವರಲ್ಲಿ ಆಸಕ್ತಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಬುಧವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಕಿನ್ನಿಗೋಳಿ ಮತ್ತು ಯುಗಪುರುಷ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ, ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ತಾಳಮದ್ದಳೆ ದಶಾಹ ಯತೋಧರ್ಮ: ತತೋಜಯ: ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಯಕ್ಷ ಪೋಷಕರ ನೆಲೆಯಲ್ಲಿ ಸನ್ಮಾನಗೊಂಡ ಉದ್ಯಮಿ ಶೇಖರ ಕರ್ಕೇರಾ ಮಾತನಾಡಿ, ಜೀವನಕ್ಕೆ ಉತ್ತಮ ಸಂದೇಶ ನೀಡುವ ಯಕ್ಷಕಲೆಗಳನ್ನು ಕೇವಲ ಮನೋರಂಜನೆ ಎಂದೆಣಿಸದೆ ನಮ್ಮ ಮುಂದಿನ ಜನಾಂಗಕ್ಕೆ ಮಾರ್ಗದರ್ಶಿಯಾಗಲು ಕಲೆಯ ಅಭಿವೃದ್ಧಿಗಾಗಿ ಸಹಕಾರ ನೀಡಬೇಕು ಎಂದರು.
ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮಉಡುಪರು ಅಭಿನಂದನಾ ಭಾಷಣಗೈದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಹರಿ ಭಟ್, ನಿವೃತ್ತ ತಹಶೀಲ್ದಾರ್ ಮೋಹನ ರಾವ್, ಮಂಗಳೂರು ಕಾಳಿಕಾಂಬ ವಿನಾಯಕ ದೇವಳದ ಮೊಕ್ತೇಸರ ಕೆ. ಉದಯ ಕುಮಾರ್ ಆಚಾರ್ಯ, ಕಿನ್ನಿಗೋಳಿ ಸರಾಫ್ ಅಣ್ಣಯ್ಯ ಆಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಪ್ರಥ್ವಿರಾಜ ಆಚಾರ್ಯ, ಉದ್ಯಮಿ ಶ್ರೀಪತಿ ಭಟ್, ಉಪಸ್ಥಿತರಿದ್ದರು.
ಯಕ್ಷಲಹರಿ ಕಾರ್ಯದರ್ಶಿ ಪಿ.ಸತೀಶ ರಾವ್ ಸ್ವಾಗತಿಸಿ, ರಘುನಾಥ ಕಾಮತ್ ಕೆಂಚನಕೆರೆ ವಂದಿಸಿದರು. ಕೆಮ್ರಾಲ್ ಕೃಷ್ಣರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-05081502

Comments

comments

Comments are closed.

Read previous post:
Kinnigoli-05081501
ಕಿನ್ನಿಗೋಳಿ ಸುವ್ಯವಸ್ಥೆ ಪಾರ್ಕಿಂಗ್ ಮನವಿ

ಕಿನ್ನಿಗೋಳಿ: ಮುಲ್ಕಿ- ಮೂಡಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ನಡುವೆ ಇರುವ ಕಿನ್ನಿಗೋಳಿ ತ್ವರಿತಗತಿಯಿಂದ ಬೆಳೆಯುತ್ತಿದ್ದು ಪೇಟೆಯ ಹೃದಯ ಭಾಗದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಕಂಡು ಬರುತ್ತಿದೆ. ಘನ ವಾಹನ, ಲಘು ವಾಹನ,...

Close