ಆಯುರ್ವೇದ ಗಿಡಗಳ ವಿತರಣೆ

ಮೂಲ್ಕಿ: ಪ್ರಕೃತಿ ರಕ್ಷಣೆಗಾಗಿ ನಾವಯ ಸಸ್ಯ ಪ್ರಭೇದಗಳನ್ನು ಮನೆಯ ಆವರಣದಲ್ಲಿ ಬೆಳೆಸುವಾಗ ಹೆಚ್ಚಾಗಿ ಫಲ, ಪುಷ್ಪ ಹಾಗೂ ಆಯುರ್ವೇದ ಗುಣ ಉಳ್ಳ ಸಸ್ಯಗಳನ್ನು ಬೆಳೆಸಿದಲ್ಲಿ ನಮಗೆ ಮತ್ತು ನಮ್ಮಿಂದ ಸಮಾಜಕ್ಕೆ ಸಹಾಯವಾಗುವುದು ಎಂದು ಉಡುಪಿ ಜಿಲ್ಲಾ ಆಯುಷ್ ಅಧ್ಯಕ್ಷ ಡಾ. ಎನ್.ಟಿ ಅಂಚನ್ ಪಡುಬಿದ್ರಿ ಹೇಳಿದರು.
ಮೂಲ್ಕಿ-ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಶ್ರೀ ದುರ್ಗಾ ಪತಂಜಲಿ ಯೋಗ ಶಾಖೆ ವತಿಯಿಂದ ಆಯುರ್ವೇದ ಆಚಾರ್ಯ ಬಾಲಕೃಷ್ಣರವರ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಆಯುರ್ವೇದ ಗಿಡಗಳ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಯೋಗಶಾಖಾ ಅಧ್ಯಕ್ಷ ಶಾಂತಾರಾಮ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಚಂದ್ರಶೇಖರ್ ಸುವರ್ಣ ಮತ್ತು ಡಾ. ಲತಾ ಪರಿಚಯಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ಉಪಸ್ಥಿತರಿದ್ದರು.. ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ವಂದಿಸಿದರು.

Mulki-08081501

 

Comments

comments

Comments are closed.

Read previous post:
Kinnigoli-05081503
ದುರ್ಗೆಯ ಆರಾಧನೆಯಿಂದ ಲೋಕಕಲ್ಯಾಣ

ಮೂಲ್ಕಿ: ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡುವುದರಿಂದ ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಬಹುದು. ಜೀವನದಲ್ಲಿ ಮುಂದೆ ಬರಬೇಕಾದರೆ ದೇವರ ಆಶೀರ್ವಾದವೂ ಮುಖ್ಯ.ಆಷಾಢ ಹುಣ್ಣಿಮೆಯ ದಿನದಂದು ದುರ್ಗೆಯ ಆರಾಧಿಸಿದರೆ...

Close