ಕೆಮ್ರಾಲ್: ಚೆಕ್ ವಿತರಣೆ

ಕಿನ್ನಿಗೋಳಿ: ದ.ಕ ಸಂಸದ ನಳಿನ್‌ಕುಮಾರ್ ಕಟೀಲು ಅವರ ಶಿಫಾರಸ್ಸಿನಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಕ್ಯಾನ್ಸರ್ ಚಿಕಿತ್ಸೆಗಾಗಿ 1.50 ಲಕ್ಷ ರೂ. ಮತ್ತು ವಿಧಾನ ಪರಿಷತ್‌ನ ಸದಸ್ಯ ಕೋಟ ಶ್ರಿನಿವಾಸ ಪೂಜಾರಿಯವರ ಶಿಫಾರಸ್ಸಿನಿಂದ ಮುಖ್ಯಮಂತ್ರಿ ಪರಿಹಾರ ನಿಯ 26 ಸಾವಿರ ರೂ.ನ ಪರಿಹಾರದ ಚೆಕ್‌ನ್ನು ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರು ನಿವಾಸಿ ಫಾತುಂಜ್ಞ ಅವರಿಗೆ ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ಬೊಳ್ಳೂರು ಹಸ್ತಾಂತರಿಸಿದರು. ಈ ಸಂದರ್ಭ ವಿನೋದ್ ಕುಮಾರ್ ಬೊಳ್ಳೂರು, ಹರಿಪ್ರಸಾದ್ ಶೆಟ್ಟಿ, ಮಾಲತಿ ಆಚಾರ್ಯ, ಸತೀಶ್ ಬೊಳ್ಳೂರು, ಲತೇಶ್, ರಾಜೇಶ್ ಪೂಜಾರಿ, ಜೀವನ್ ತೋಕೂರು, ಕಿರಣ್ ಕೊಕುಡೆ, ದಿನೇಶ್ ಬಿ. ಉಪಸ್ಥಿತರಿದ್ದರು.

Kinnigoli-1081504

Comments

comments

Comments are closed.

Read previous post:
Kinnigoli-1081503
ಕಿನ್ನಿಗೋಳಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ

ಕಿನ್ನಿಗೋಳಿ: ಯಾಂತ್ರಿಕತೆಯ ಭರಾಟೆಯಲ್ಲಿ ಕೈಮಗ್ಗ ಉದ್ಯಮ ಕ್ಷೀಣಿಸುತ್ತಿದೆ. ಈ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈ ಮಗ್ಗ ನೇಕಾರರರಿಗೆ ವಿವಿಧ ಸವಲತ್ತುಗಳನ್ನು ನೀಡುತ್ತಿದೆ....

Close