ಕಿನ್ನಿಗೋಳಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ

ಕಿನ್ನಿಗೋಳಿ: ಯಾಂತ್ರಿಕತೆಯ ಭರಾಟೆಯಲ್ಲಿ ಕೈಮಗ್ಗ ಉದ್ಯಮ ಕ್ಷೀಣಿಸುತ್ತಿದೆ. ಈ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈ ಮಗ್ಗ ನೇಕಾರರರಿಗೆ ವಿವಿಧ ಸವಲತ್ತುಗಳನ್ನು ನೀಡುತ್ತಿದೆ. ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಕಾಶಿನಾಥ್ ಬಾವಿಕಟ್ಟಿ ಹೇಳಿದರು.
ಕಿನ್ನಿಗೋಳಿ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ದ.ಕ. ಜಿಲ್ಲಾ ಪಂಚಾಯಿತಿ ಜಂಟೀ ಆಶ್ರಯದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ರತ್ನಾಕರ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕೈಮಗ್ಗ ದಿನಾಚರಣೆಯ ಪ್ರಯುಕ್ತ ಹಿರಿಯ ಕೈಮಗ್ಗ ನೇಕಾರರಾದ ದೂಜ ಶೆಟ್ಟಿಗಾರ್ ತಾಳಿಪಾಡಿ, ವ್ಯಾಸರಾಯ ಶೆಟ್ಟಿಗಾರ್ ಪಡುಪಣಂಬೂರು, ಕಾಂತಪ್ಪ ಬಂಗೇರ ಮಂಗಳೂರು, ಹರೀಶ್ ಶೆಟ್ಟಿಗಾರ್ ಮಿಜಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಜವಳಿ ಪ್ರವರ್ತಕ ಅಕಾರಿ ಶಿವ ಶಂಕರ್, ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್, ನಿರ್ದೇಶಕ ಮಾಧವ ಶೆಟ್ಟಿಗಾರ್, ಪಡುಪಣಂಬೂರು ನೇಕಾರ ಸಂಘದ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.

Kinnigoli-1081503

Comments

comments

Comments are closed.

Read previous post:
Kinnigoli-1081502
ಕಿನ್ನಿಗೋಳಿ ಸರ ಕಳ್ಳತನಕ್ಕೆ ಯತ್ನ

ಕಿನ್ನಿಗೋಳಿ : ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುವ ಖಾಸಗಿ ಬಸ್ಸಿನಲ್ಲಿ ಶುಕ್ರವಾರ ಮಹಿಳೆಯೋರ್ವಳು ಮಗುವಿನ ಸರ ಕದಿಯಲು ಯತ್ನಿಸುತ್ತಿದ್ದಾಗ ಪ್ರಯಾಣಿಕರು ಹಿಡಿದು ಮುಲ್ಕಿ ಪೋಲಿಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ....

Close