ಕಿನ್ನಿಗೋಳಿ ಸರ ಕಳ್ಳತನಕ್ಕೆ ಯತ್ನ

ಕಿನ್ನಿಗೋಳಿ : ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುವ ಖಾಸಗಿ ಬಸ್ಸಿನಲ್ಲಿ ಶುಕ್ರವಾರ ಮಹಿಳೆಯೋರ್ವಳು ಮಗುವಿನ ಸರ ಕದಿಯಲು ಯತ್ನಿಸುತ್ತಿದ್ದಾಗ ಪ್ರಯಾಣಿಕರು ಹಿಡಿದು ಮುಲ್ಕಿ ಪೋಲಿಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
ಸುರತ್ಕಲ್‌ನ ಚಿತ್ರ ತಮ್ಮ ಮಗು ದಾತ್ರಿ ಮತ್ತು ಮನೆಯವರೊಂದಿಗೆ ಕಟೀಲು ದೇವಳಕ್ಕೆ ಬೇಟಿ ನೀಡಿ ಕಟೀಲಿನಿಂದ ಕಿನ್ನಿಗೋಳಿ ಮೂಲಕ ಮಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಸಿನಲ್ಲಿ ವಾಪಸಾಗುತ್ತಿದ್ದಾಗ ತಮಿಳುನಾಡು ಮೂಲದ ಮಹಿಳೆ ಚಿತ್ರ ಅವರ ಕೈಯಲ್ಲಿದ್ದ ಮಗುವಿನ ಕುತ್ತಿಗೆಗೆ ಕೈ ಹಾಕಿ ಸರ ಕಳ್ಳತನಕ್ಕೆ ಯತ್ನಿಸುವಾಗ, ಹಿಂದಿನಿಂದ ಮನೆಯವರು ಗಮನಿಸಿ ಕೂಡಲೇ ಬಸ್ಸು ನಿರ್ವಾಹಕ ದಿವಾಕರ ಶೆಟ್ಟಿ ಅವರ ಬಳಿ ತಿಳಿಸಿದ್ದು ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಮಹಿಳೆಯನ್ನು ಕೆಳಗಿಳಿಸಿದ ಪ್ರಯಾಣಿಕರು ಕಿನ್ನಿಗೋಳಿ ಪಂಚಾಯಿತಿ ಸದಸ್ಯೆ ಸುನಿತಾ ಜೀಟಾ ರೋಡ್ರಿಗಸ್ ಮುಲ್ಕಿ ಪೋಲಿಸರಿಗೆ ವಿಷಯ ತಿಳಿಸಿದಾಗ ಪೋಲಿಸರು ಸ್ಥಳಕ್ಕಾಗಮಿಸಿ ಮಹಿಳೆಯನ್ನು ಬಂಸಿ, ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶುಕ್ರವಾರ ಮತ್ತು ಶ್ರಾವಣ ತಿಂಗಳಿನಲ್ಲಿನಂತಹ ವಿಶೇಷ ದಿನಗಳಲ್ಲಿ, ಕಟೀಲಿಗೆ ಹೋಗುವ ಬರುವ ಬಸ್ಸುಗಳಲ್ಲಿ ಜನಜಂಗುಳಿ ಇದ್ದು ಈ ಸಂದರ್ಭ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಾರೆ. ಇಂತಹ ಪ್ರಕರಣ ಮಾಮೂಲಿಯಾಗಿದ್ದು, ಕರ್ತವ್ಯ ನಿರ್ವಹಿಸುವಾಗ ಇದುವರೆಗೆ ಇಂತಹ ಐದು ಪ್ರಕರಣಗಳು ನಡೆದಿದೆ ಎಂದು ಬಸ್ಸು ನಿರ್ವಾಹಕ ದಿವಾಕರ ಶೆಟ್ಟಿ ಮಾದ್ಯಮದವರೊಂದಿಗೆ ಹೇಳಿದರು.
ಗುರುವಾರ ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ಬೈಕ್ ನಲ್ಲಿ ಬಂದ ಎರಡು ಮಂದಿ ದಾರಿ ಕೇಳುವ ನೆಪದಲ್ಲಿ ಮಹಿಳೆಯೊರ್ವರ ಸರ ಎಗರಿಸಿ ಪರಾರಿಯಾಗಿದ್ದಾರೆ.

Kinnigoli-1081502

Comments

comments

Comments are closed.