ಕನ್ನಡತ್ವದ ಯಕ್ಷಗಾನ ತಾಳಮದ್ದಲೆ

ಕಿನ್ನಿಗೋಳಿ: ಸಂಸ್ಕಾರ ಸಂಸ್ಕೃತಿ ಹಾಗೂ ಶುದ್ಧ ಕನ್ನಡತ್ವವನ್ನು ಉಳಿಸಿ ಬೆಳಸುವ ಯಕ್ಷಗಾನ ತಾಳಮದ್ದಲೆಯಂತಹ ಕಲಾ ಪ್ರಕಾರಗಳು ಹಾಗೂ ಸಮಾಜಪಯೋಗಿ ಯೋಜನೆಗಳನ್ನು ಪ್ರೋತ್ಸಾಹಿಸಬೇಕು. ಎಂದು ಡಾ. ಐ.ವಿ. ರಾಘವೇಂದ್ರ ಆಸ್ರಣ್ಣ ಹೇಳಿದರು.
ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಕಿನ್ನಿಗೋಳಿ ಮತ್ತು ಯುಗಪುರುಷ ಆಶ್ರಯದಲ್ಲಿ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ, ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ತಾಳಮದ್ದಳೆ ದಶಾಹ ಹಾಗೂ *ಯಕ್ಷ ಗಾನಸುಧಾ* ಪ್ರಾತ್ಯಕ್ಷಿತೆಯ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಕಲಾ ಪೋಷಕರ ನೆಲೆಯಲ್ಲಿ ಯಕ್ಷ ಸಂಘಟಕ ಸುಧಾಕರ ರಾವ್ ಏಳಿಂಜೆ, ಉದ್ಯಮಿ ರಮೇಶ್ ಎಲ್. ಕುಂದರ್ ದಂಪತಿಯರನ್ನು ಸನ್ಮಾನಿಸಲಾಯಿತು.
ಸುರಗಿರಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವೆ.ಮೂ. ವಿಶ್ವೇಶ್ವರ ಭಟ್ ಆಶೀರ್ವಚನಗೈದರು. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಟೀಲು ನಂದಿನಿ ಬ್ರಾಹ್ಮಣ ಸಭಾ ಅಧ್ಯಕ್ಷ ಡಾ. ಶಶಿಕುಮರ್ ಕಟೀಲು, ಹಳೆಯಂಗಡಿ ಪೂಜಾ ಆರೇಂಜರ‍್ಸ್ ಮಾಲಕ ಜೈಕೃಷ್ಣ ಕೋಟ್ಯಾನ್, ಉಪಸ್ಥಿತರಿದ್ದರು.
ಯಕ್ಷಲಹರಿ ಕಾರ್ಯದರ್ಶಿ ಪಿ.ಸತೀಶ ರಾವ್ ಸ್ವಾಗತಿಸಿ, ಸುಧಾಕರ ಕುಲಾಲ್ ಮತ್ತು ವಿನಯ ಆಚಾರ್ ಪ್ರಶಸ್ತಿ ಪತ್ರ ವಾಚಿಸಿದರು. ರಘುನಾಥ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-1081506

 

Comments

comments

Comments are closed.

Read previous post:
Kinnigoli-1081505
ಯಕ್ಷಗಾನದಲ್ಲಿ ಶುದ್ದ ಕನ್ನಡ ಭಾಷಾ ಸಾಹಿತ್ಯವಿದೆ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಲೆಯಲ್ಲಿ ಶುದ್ದ ಕನ್ನಡದ ಭಾಷಾ ಸಾಹಿತ್ಯವಿದೆ. ಸಂಘ ಸಂಸ್ಥೆಗಳು ಜನರಲ್ಲಿ ಆಸಕ್ತಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಎಂದು ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹಣ್ಯ ದೇವಳದ...

Close