ಯಕ್ಷಗಾನದಲ್ಲಿ ಶುದ್ದ ಕನ್ನಡ ಭಾಷಾ ಸಾಹಿತ್ಯವಿದೆ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಲೆಯಲ್ಲಿ ಶುದ್ದ ಕನ್ನಡದ ಭಾಷಾ ಸಾಹಿತ್ಯವಿದೆ. ಸಂಘ ಸಂಸ್ಥೆಗಳು ಜನರಲ್ಲಿ ಆಸಕ್ತಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಎಂದು ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹಣ್ಯ ದೇವಳದ ಧರ್ಮದರ್ಶಿ ಯಜಿ ಡಾ. ನಿರಂಜನ ಭಟ್ ಹೇಳಿದರು.
ಶುಕ್ರವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಕಿನ್ನಿಗೋಳಿ ಮತ್ತು ಯುಗಪುರುಷ ಆಶ್ರಯದಲ್ಲಿ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ, ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ತಾಳಮದ್ದಳೆ ದಶಾಹ ಯತೋಧರ್ಮ: ತತೋಜಯ: ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿಮಾತನಾಡಿದರು.
ಈ ಸಂದರ್ಭ ಕಲಾ ಪೋಷಕರ ನೆಲೆಯಲ್ಲಿ ದೊಡ್ಡಯ್ಯ ಮೂಲ್ಯ ಕಟೀಲು, ರಾಮಕೃಷ್ಣ ರಾವ್ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಅಗರಿ ರಾಘವೇಂದ್ರ ರಾವ್ ಸುರತ್ಕಲ್ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಜ್ಯೋತಿಷಿ ವೆ.ಮೂ. ವಿದ್ವಾನ್ ಕಬ್ಯಾಡಿ ಜಯರಾಮ ಆಚಾರ್ಯ, ಉದ್ಯಮಿ ಶಾಂಭವಿ ಶೆಟ್ಟಿ, ಹಿರಿಯ ಮಹಿಳಾ ಯಕ್ಷಗಾನ ಕಲಾವಿದೆ ವಿದ್ಯಾ ರಮೇಶ್ ಭಟ್, ಯುಗಪುರುಷದ ಭುವನಾಭಿರಾಮ ಉಡುಪ,ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದ್ಯಮಿ ಶ್ರೀಪತಿ ಭಟ್, ಉಪಸ್ಥಿತರಿದ್ದರು.
ಯಕ್ಷಲಹರಿ ಕಾರ್ಯದರ್ಶಿ ಪಿ.ಸತೀಶ ರಾವ್ ಸ್ವಾಗತಿಸಿದರು. ಶ್ರೀ ವತ್ಸ ಕಾರ್ಯಕ್ರಮ ನಿರೂಪಿಸಿದರು.

Kinnigoli-1081505

Comments

comments

Comments are closed.

Read previous post:
Kinnigoli-1081504
ಕೆಮ್ರಾಲ್: ಚೆಕ್ ವಿತರಣೆ

ಕಿನ್ನಿಗೋಳಿ: ದ.ಕ ಸಂಸದ ನಳಿನ್‌ಕುಮಾರ್ ಕಟೀಲು ಅವರ ಶಿಫಾರಸ್ಸಿನಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಕ್ಯಾನ್ಸರ್ ಚಿಕಿತ್ಸೆಗಾಗಿ 1.50 ಲಕ್ಷ ರೂ. ಮತ್ತು ವಿಧಾನ ಪರಿಷತ್‌ನ ಸದಸ್ಯ ಕೋಟ...

Close