ಯಕ್ಷಗಾನ ಭಾಷಾ ಫ್ರೌಡಿಮೆ, ಜ್ಞಾನ ಹೆಚ್ಚಿಸಬಲ್ಲುದು

ಕಿನ್ನಿಗೋಳಿ: ಪುರಾಣ ಸಾಹಿತ್ಯದ ಅರಿವನ್ನು ನೀಡುವ ಯಕ್ಷಗಾನ ಕಲಾ ಪ್ರಕಾರಗಳು ಕನ್ನಡ ಭಾಷಾ ಫ್ರೌಡಿಮೆ, ಜ್ಞಾನವನ್ನು ಹೆಚ್ಚಿಸಬಲ್ಲುದು. ಎಂದು ಮುಲ್ಕಿ ಬಪ್ಪನಾಡು ದೇವಳದ ಅರ್ಚಕ ಶ್ರೀಪತಿ ಉಪಾದ್ಯಾಯ ಹೇಳಿದರು
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ಗುರುವಾರ ನಡೆದ ತಾಳಮದ್ದಳೆ ದಶಾಹಃ ಯತೋಧರ್ಮ: ತತೋಜಯ: ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಈ ಸಂದರ್ಭ ವಿದ್ವಾಂಸರ ನೆಲೆಯಲ್ಲಿ ಹೊಸಬೆಟ್ಟು ಶ್ರೀ ಗುರು ರಾಘವೇಂದ್ರ ಮಠದ ಧರ್ಮದರ್ಶಿ ಹರಿದಾಸ ಯಸ್ ವಾದೀಶಾಚಾರ್ಯ ಮತ್ತು ಮೂಡಬಿದ್ರೆ ಅಲಂಗಾರು ಕ್ಷೇತ್ರದ ಆಡಳಿತ ಮೊಕ್ತೇಸರ ಈಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.
ಪುನರೂರು ಶ್ರೀ ವಿಶ್ವನಾಥ ದೇವಳದ ಪಟೇಲ್ ವಾಸುದೇವ ರಾವ್ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದ್ರಿ ಉದ್ಯಮಿ ಎ,ಕೆ.ರಾವ್, ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕ.ಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಯಕ್ಷಲಹರಿ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ, ಕಾರ್ಯದರ್ಶಿ ಪಿ.ಸತೀಶ ರಾವ್, ಕೋಶಾಕಾರಿ ಪ್ರೊ.ಜಗದೀಶ ಹೊಳ್ಳ ಉಪಸ್ಥಿತರಿದ್ದರು. ಉಮೇಶ ನೀಲಾವರ ಕಾರ್ಯಕ್ರಮ ನಿರೂಪಿಸಿದರು.

Kinnigoli-1081501

Comments

comments

Comments are closed.

Read previous post:
Mulki-08081501
ಆಯುರ್ವೇದ ಗಿಡಗಳ ವಿತರಣೆ

ಮೂಲ್ಕಿ: ಪ್ರಕೃತಿ ರಕ್ಷಣೆಗಾಗಿ ನಾವಯ ಸಸ್ಯ ಪ್ರಭೇದಗಳನ್ನು ಮನೆಯ ಆವರಣದಲ್ಲಿ ಬೆಳೆಸುವಾಗ ಹೆಚ್ಚಾಗಿ ಫಲ, ಪುಷ್ಪ ಹಾಗೂ ಆಯುರ್ವೇದ ಗುಣ ಉಳ್ಳ ಸಸ್ಯಗಳನ್ನು ಬೆಳೆಸಿದಲ್ಲಿ ನಮಗೆ ಮತ್ತು...

Close