ಬ್ರಾಹಣತ್ವ ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ: ಜಪ, ತಪ, ಪೂಜೆ ಪುನಸ್ಕಾರ, ಆಚಾರ ಹಾಗೂ ವ್ರತ ಅನುಷ್ಟಾನಗಳಿಂದ ಬ್ರಾಹ್ಮಣತ್ವವನ್ನು ಉಳಿಸುವ ಜವಾಬ್ದಾರಿ, ಮಕ್ಕಳಿಗೆ ತಿಳಿ ಹೇಳುವ ಅನಿವಾರ್ಯತೆ ನಮ್ಮ ಮುಂದಿದೆ ಎಂದು ವಿದ್ವಾಂಸ ವಾದಿರಾಜ ಕೊಲಕಾಡಿ ಹೇಳಿದರು.
ಭಾನುವಾರ ಕಟೀಲು ಸಾನಿಧ್ಯ ಸಭಾ ಭವನದಲ್ಲಿ ನಡೆದ ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಉದ್ಯಮಿ ಶ್ರೀಪತಿ ಭಟ್ ಮೂಡುಬಿದ್ರೆ ಪ್ರತಿಭಾ ಪುರಸ್ಕಾರ ನೀಡಿದರು.
ಈ ಸಂದರ್ಭ ಸಾಹಿತಿ ಗಾಯತ್ರಿ ಎಸ್. ಉಡುಪ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಬಹುಮಾನಗಳನ್ನು ವಿತರಿಸಿದರು.
ನಂದಿನಿ ಬ್ರಾಹ್ಮಣ ಸಭಾ ಅಧ್ಯಕ್ಷ ಡಾ. ಶಶಿಕುಮಾರ್ ಸಂಘದ ಚಟುವಟಿಕೆಗಳ ಕುರಿತು ಮಾತನಾಡಿದರು. ಉಪಾಧ್ಯಕ್ಷ ಎಕ್ಕಾರು ಡಾ. ಪದ್ಮನಾಭ ಭಟ್ ಸ್ವಾಗತಿಸಿ ಕೋಶಾಧಿಕಾರಿ ರಾಘವೇಂದ್ರ ಭಟ್ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ವೇದವ್ಯಾಸ ಉಡುಪ ವಂದಿಸಿದರು. ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Kinnigoli-11081505

Comments

comments

Comments are closed.

Read previous post:
Kinnigoli-11081504
ಕಿರೆಂ ಗಾದ್ಯಾಂತ್ ಏಕ್ ದೀಸ್

ಕಿನ್ನಿಗೋಳಿ: ಊರ ಪರವೂರಿನ ಸಮುದಾಯ ಭಾಂಧವರನ್ನು ಪ್ರೀತಿ, ವಿಶ್ವಾಸ ಸೌಹಾರ್ಧತೆಯ ಬಾಂಧವ್ಯಗಳನ್ನು ಹೆಚ್ಚಿಸಲು ಮತ್ತು ಕೃಷಿ ಜೀವನದ ವಿವಿಧ ಮಜಲುಗಳನ್ನು ಯುವಕರಲ್ಲಿ ತಿಳಿ ಹೇಳಲು ಕೃಷಿಯ ಬಗ್ಗೆ ಆಸಕ್ತಿ...

Close