ಡಾ| ಎನ್. ಸುಕುಮಾರ ಗೌಡ ಆಯ್ಕೆ

ಕಿನ್ನಿಗೋಳಿ: ಅಗೋಸ್ತು 28,29, 30 ರಂದು ಕಟೀಲಿನಲ್ಲಿ ಜರಗಲಿರುವ 20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಶಿಕ್ಷಣ ತಜ್ಞ ಪುತ್ತೂರು ಡಾ| ಎನ್. ಸುಕುಮಾರ ಗೌಡ ಆಯ್ಕೆಯಾಗಿರುತ್ತಾರೆ. ಎಂದು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬನಾರಸ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಇಡಿ ಪದವಿಯನ್ನು ಪಡೆದಿರುವ ಶ್ರೀಯುತರು ಕೆನಡಾದ ಕ್ವೀನ್ಸ್ ವಿವಿಯಿಂದ ಎಂ.ಇಡಿ , ಟೊರೆಂಟೋ ವಿವಿಯಿಂದ ಪಿ.ಹೆಚ್.ಡಿ. ಪಡೆದಿದ್ದಾರೆ.ಅನೇಕ ಉಪಯುಕ್ತ ಹಾಗೂ ಮೌಲ್ಯಾಧಾರಿತ ಪುಸ್ತಕಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬರೆದು ಪ್ರಕಟಿಸಿದ್ದಾರೆ ಮಗು ಮನೆಯಿಂದ ಶಾಲೆಗೆ, ಕಲಿಕೆ, ಗುಣಶೋಧ ಎನ್ನುವ ಶಿಕ್ಷಣ ಚಿಂತನಗಳುಳ್ಳ ಪುಸ್ತಕಗಳಲ್ಲದೆ, ಇಂಗ್ಲೀಷ್ ಭಾಷೆಯಲ್ಲಿ Problems and Prospects of our Education, (ಡಾ. ಶಿವರಾಮ ಕಾರಂತರಿಂದ ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ ಎನ್ನುವ ಶೀರ್ಷಿಕೆಯಡಿಯಲ್ಲಿ ಕನ್ನಡಕ್ಕೆ ಅನುವಾದವಾಗಿದೆ.) ‘Language for Doctors, Basic English hand book for beginners, Basic English a hand book for Students Learinig and the hearner  ಮುಂತಾದ ಪುಸ್ತಕಗಳನ್ನು ಬರೆದಿರುವರು. ಇವರ ಕುರಿತಾಗಿ ಕಾಂತಾವರ ಕನ್ನಡ ಸಂಘವು 2014ರಲ್ಲಿ ಶಿಕ್ಷಣ ಸಿದ್ದಾಂತಿ ಡಾ. ಎನ್. ಸುಕುಮಾರ ಗೌಡ ಎನ್ನುವ ವ್ಯಕ್ತಿ ಚಿತ್ರಣ ಹೊತ್ತಗೆಯನ್ನು ಪ್ರಕಟಿಸಿರುತ್ತದೆ. ಕೆನಡ ಕಿಬೆಕ್ ಪ್ರಾಂತ್ಯದ ರೀಡಿಂಗ್ ಎಸೋಸಿಯೇಶನ್ ದತ್ತಿನಿಧಿ ಪ್ರಶಸ್ತಿ, ಕೆನಡಾ ಕೌನ್ಸಿಲ್‌ನ ಫೆಲೋಶಿಪ್ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹಿತ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ. 1975ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಕೆನಡಾ ದೇಶಕ್ಕೆ ತೆರಳಿದ ಅವರು ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದ ವರೆಗೆ 12 ವರ್ಷಗಳ ಅವಧಿಯ ಅದ್ಯಾಪನ, ಅಧ್ಯಯನವನ್ನು ನಡೆಸಿರುತ್ತಾರೆ. ಎಂದು ಹೇಳಿದರು
ಈ ಸಂದರ್ಭ ಸಾಹಿತಿ ನಿತ್ಯಾನಂದ ಕಾರಂತ, ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಹಾಗೂ ಹಿರಿಯ ಸಾಹಿತಿ ಎನ್.ಪಿ. ಶೆಟ್ಟಿ ಉಪಸ್ಥಿತರಿದ್ದರು.

Kinnigoli-11081502

Comments

comments

Comments are closed.

Read previous post:
Kinnigoli-11081501
ಜ್ಞಾನ ಯಕ್ಷಗಾನ ತಾಳಮದ್ದಲೆಗಳಿಂದ ಸಾಧ್ಯ

ಕಿನ್ನಿಗೋಳಿ: ಭಾಷಾ ಪಾಂಡಿತ್ಯ, ಅಗಾಧ ಜ್ಞಾನ, ಪ್ರಾತ್ರದ ಹಿರಿಮೆ ಗರಿಮೆ ವಿಶೇಷತೆಗಳನ್ನು ಪ್ರಚುರ ಪಡಿಸುವ ಯಕ್ಷಗಾನ ತಾಳಮದ್ದಲೆಗಳಂತಹ ಕಲಾ ಪ್ರಕಾರಗಳಿಮದ ಸಾಧ್ಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕರ್ಣಾಟಕ ಬ್ಯಾಂಕ್...

Close